ಮೈಸೂರು: ದಸರಾ ಉದ್ಘಾಟಕರ ಆಯ್ಕೆ ವಿಚಾರದಲ್ಲಿ ಬಿಜೆಪಿ ಧಾರ್ಮಿಕ ಬಣ್ಣ ಬಳಿಯುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಪ್ರತಿಭಟಿಸಿದರು.

ಪತ್ರಕರ್ತ ಗುರುರಾಜ್ ಮಾತನಾಡಿ, ‘ದಸರಾ ನಾಡಹಬ್ಬ, ಅದಕ್ಕೆ ಧರ್ಮದ ಕೆಸರು ಎರಚಿ ಕೇಸರೀಕರಣ ಮಾಡುವ ಕೆಲಸವಾಗುತ್ತಿದೆ. ಕನ್ನಡದ ಹೆಸರನ್ನು ಪ್ರಪಂಚಕ್ಕೆ ಸಾರಿದ ಮೇರು ವ್ಯಕ್ತಿಯನ್ನು ಧಾರ್ಮಿಕ ಕಾರಣಕ್ಕೆ ದೂಷಿಸುತ್ತಿರುವುದು ನಾಚಿಕೆಗೇಡಿನ ವಿಚಾರ. ಸಚಿವೆ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್ ಸಾಧ್ಯವಿದ್ದರೆ ಬೆಟ್ಟ ಹತ್ತಲಿ ಎಂದು ಸವಾಲು ಹಾಕಿದ್ದಾರೆ. ಬೆಟ್ಟವನ್ನು ಇವರಿಗೆ ಬರೆದುಕೊಟ್ಟಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಪ್ರತಾಪ ಸಿಂಹ ಅವರು ಬಾನು ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು ದಸರಾ ಉದ್ಘಾಟಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಅವರ ಕಣ್ಣಿಗೆ ಬಾನು ಮುಷ್ತಾಕ್ ನಿತ್ಯ ಸೀರೆ ಉಡುವುದು ಕಂಡಿಲ್ಲವೇ. ದಸರಾದ ಸಾಂಸ್ಕೃತಿಕ ಹಿನ್ನೆಲೆ ಅರಿಯದ ಕೊಳಕು ಮನಸ್ಸುಗಳು ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುತ್ತಿದ್ದಾರೆ. ಇದರ ಮರ್ಮ ಅರಿಯದೆ ಅನೇಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮಠಾಧೀಶರನ್ನಷ್ಟೇ ಉದ್ಘಾಟನೆಗೆ ಕರೆತರಲಾಯಿತು. ಆದರೆ ಕಾಂಗ್ರೆಸ್ ಸಾಹಿತಿಗಳು, ರೈತರನ್ನು ಗುರುತಿಸಿದೆ’ ಎಂದರು.

‘ನಿಸಾರ್ ಅಹಮದ್ ಅವರ ಬಗ್ಗೆಯೂ ಕೊಳಕು ಮನಸ್ಸುಗಳು ಮಾತನಾಡಿದ್ದವು. ಚಿನ್ನದ ಅಂಬಾರಿಯನ್ನು ಅಕ್ರಂ ಕಟ್ಟಿದಾಗ ಆಗದ ಅಪಚಾರ, ಬಾನು ಮುಷ್ತಾಕ್ ಉದ್ಘಾಟನೆ ಮಾಡಿದರೆ ಹೇಗಾಗುತ್ತದೆ. ಮುಖ್ಯಮಂತ್ರಿ ಈ ನಿರ್ಧಾರದಿಂದ ಹಿಂದೆ ಸರಿಯಬಾರದು’ ಎಂದು ಒತ್ತಾಯಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜೆನ್ನಿ) ಮಾತನಾಡಿ, ‘ಇದು ಆರ್ಎಸ್ಎಸ್ ಅರಮನೆಯಲ್ಲ, ನಾಗ್ಪುರದಲ್ಲಿ ಏನಾದರೂ ಆಚರಣೆ ಮಾಡಿಕೊಂಡರೆ ಅದನ್ನು ನಾವು ಪ್ರಶ್ನಿಸುವುದಿಲ್ಲ. ಕನ್ನಡವನ್ನು ಸರಿಯಾಗಿ ಮಾತನಾಡಲು ಬಾರದವರು, ಕನ್ನಡದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಸಾಹಿತಿ ಕೆ.ಎಸ್. ಭಗವಾನ್, ಸವಿತಾ ಮಲ್ಲೇಶ್, ಜಗದೀಶ್ ಸೂರ್ಯ, ಬಸವಲಿಂಗಯ್ಯ, ನಾ.ದಿವಾಕರ್, ಕಾಳಚೆನ್ನೇಗೌಡ, ಅಹಿಂದ ಜವರಪ್ಪ, ರತಿರಾವ್, ಹೊಸಕೋಟೆ ಬಸವರಾಜ್, ಹೊರೆಯಾಲ ದೊರೆಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.