ನಗರ ಸಾರಿಗೆ ನಿಲ್ದಾಣ ತಾತ್ಕಾಲಿಕ ಬಂದ್
ದಸರಾ ಅಂಗವಾಗಿ ಅರಮನೆಗೆ ಹೊಂದಿಕೊಂಡಂತೆಯೇ ಇರುವ ನಗರ ಬಸ್ ನಿಲ್ದಾಣವನ್ನು ಸೋಮವಾರದಿಂದ (ಸೆ. 22) ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ. ಇದರ ಬದಲಿಗೆ ಗಾಂಧಿ ವೃತ್ತ ಡಿ. ಬನುಮಯ್ಯ ಕಾಲೇಜು ರಸ್ತೆ ಮಿರ್ಜಾ ಇಸ್ಲಾಯಿಲ್ ರಸ್ತೆ ಬಳಿ ಮೂರು ತಾತ್ಕಾಲಿಕ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದಲೇ ನಗರದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚರಿಸಲಿವೆ. ಅ.2ರವರೆಗೂ ಈ ವ್ಯವಸ್ಥೆ ಜಾರಿಯಲ್ಲಿ ಇರಲಿದೆ.