ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಸೂರು: ‘ಆಮೆ’ ವೇಗದಲ್ಲಿ ‘ನಂದಿ’ ಮಾರ್ಗ ದುರಸ್ತಿ!

Published : 17 ಮೇ 2025, 4:19 IST
Last Updated : 17 ಮೇ 2025, 4:19 IST
ಫಾಲೋ ಮಾಡಿ
Comments
ಪ್ರಾಯೋಗಿಕವಾಗಿ ಕೆಲವು ತೊಡಕುಗಳಿವೆ. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು ಕಾಮಗಾರಿಯು 2–3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ
ಜಿ.ಕೆ. ರೇವಣ್ಣ ಎಇ ಲೋಕೋಪಯೋಗಿ ಇಲಾಖೆ
ಹಲವು ಸವಾಲುಗಳಿವೆ...
₹ 9.90 ಕೋಟಿ ಮೊತ್ತದ ಕಾಮಗಾರಿಯನ್ನು ಚೆನ್ನೈ ಮೂಲದ ಗುತ್ತಿಗೆದಾರರು ಟೆಂಡರ್ ಮೂಲಕ ಪಡೆದಿದ್ದಾರೆ. 350 ಮೀಟರ್ ರಸ್ತೆ ಮರು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಆ ರಸ್ತೆಯು ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳನ್ನು ಬಳಸುವುದು ಕಷ್ಟವಾಗುತ್ತಿದೆ. ಏಕಮುಖವಾಗಿ ಮಾತ್ರವೇ ಸಂಚರಿಸಬೇಕು. ವಾಹನ ರಿವರ್ಸ್‌ ತೆಗೆದುಕೊಳ್ಳುವುದು ಸರಕು–ಸಾಮಗ್ರಿಗಳನ್ನು ಸಾಗಿಸುವುದು ಸವಾಲಿನ ಕೆಲಸ. ಆದ್ದರಿಂದ ವಿಳಂಬ ಆಗುತ್ತಿದೆ. ಗುತ್ತಿಗೆದಾರರಿಗೆ 6 ಬಾರಿ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ. ಹಂತ ಹಂತವಾಗಿ ಕೆಲಸ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಈ ನಡುವೆ ಮೊದಲಿಗೆ ಸಂಭವಿಸಿದ್ದ ಕುಸಿತದ ಸ್ಥಳದಿಂದ ಸಮೀಪದಲ್ಲಿಯೇ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿದ್ದ ರಸ್ತೆಯನ್ನೂ ದುರಸ್ತಿಗೆ ಸೇರಿಸಿಕೊಳ್ಳಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ₹ 3 ಕೋಟಿ ಒದಗಿಸಲಾಗಿದೆ. ಇದರಿಂದಾಗಿ ಯೋಜನಾ ಮೊತ್ತವು ಏರಿಕೆಯಾಗಿದೆ.
ಪ್ರಗತಿ ಪರಿಶೀಲಿಸಿಲ್ಲ!
ಭೂಕುಸಿತ ನಡೆದದ್ದು 2021ರಲ್ಲಾದರೆ ದುರಸ್ತಿ ಕಾಮಗಾರಿ ಶುರುವಾಗಿದ್ದ 2022ರ ಡಿಸೆಂಬರ್‌ನಲ್ಲಿ. ಮತ್ತೊಂದು ಮಳೆಗಾಲ ಬರುತ್ತಿದೆ. ಆಗ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಭಾರಿ ಮಳೆಯಾದ ಪಕ್ಷದಲ್ಲಿ ಮಣ್ಣು ಜರುಗುವ ಹಾಗೂ ಭೂಕುಸಿತ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎನ್ನುತ್ತಾರೆ ಪರಿಸರವಾದಿಗಳು. ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಮೇಲುಸ್ತುವಾರಿ ವಹಿಸಲಾಗಿದೆ. ವರ್ಗಾವಣೆ ಮೊದಲಾದ ಕಾರಣಗಳಿಂದಾಗಿ ಅಧಿಕಾರಿಗಳು ಪದೇ ಪದೇ ಬದಲಾಗುತ್ತಿರುವುದು ಕೂಡ ಪರಿಣಾಮ ಬೀರಿದೆ. ಜಿಲ್ಲಾಡಳಿತವಾಗಲಿ ಹಿರಿಯ ಅಧಿಕಾರಿಗಳಾಗಲಿ ಪ್ರಗತಿ ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ! ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT