ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರು ದೇವರ ಪ್ರತಿನಿಧಿ: ಡಾ.ಎಂ.ಜಿ.ಆರ್‌.ಅರಸ್‌

ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಎಂ.ಜಿ.ಆರ್‌.ಅರಸ್‌
Published 1 ಜುಲೈ 2024, 16:20 IST
Last Updated 1 ಜುಲೈ 2024, 16:20 IST
ಅಕ್ಷರ ಗಾತ್ರ

ಮೈಸೂರು: ‘ವೈದ್ಯರು ದೇವರಲ್ಲ. ದೇವರ ಪ್ರತಿನಿಧಿಗಳು. ಜನರ ಆರೋಗ್ಯ ಕಾಪಾಡಿ ಆರೈಕೆ ಮೂಲಕ ಜೀವ ಉಳಿಸುವ ಆ ವೃತ್ತಿ ಪವಿತ್ರವಾದುದು’ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಎಂ.ಜಿ.ಆರ್‌.ಅರಸ್‌ ಹೇಳಿದರು.

ನಗರದ ನಮನ ಕಲಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಡಾ.ಬಿ.ಸಿ.ರಾಯ್‌ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೈಕೆ ಮಾಡಿ ಮರುಜೀವ ನೀಡುವ ವಿಶೇಷ ಶಕ್ತಿ ವೈದ್ಯಲೋಕಕ್ಕೆ ಇದೆ. ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ದೇವರಾಗುತ್ತಾರೆ. ಅವರಿಗೆ ಸಲ್ಲಿಸುವ ಕೃತಜ್ಞತಾ ಮನೋಭಾವವೇ ದೇವರು’ ಎಂದರು.

ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಹನುಮಂತಪ್ಪ ಮಾತನಾಡಿ, ‘ಪ್ರಶಸ್ತಿ ಸ್ವೀಕರಿಸಿರುವುದು ಖುಷಿ ಇದೆ. ವೈದ್ಯಕೀಯ ವೃತ್ತಿಯಲ್ಲಿ ಸೇವೆಯ ಜೊತೆಗೆ ಮಾನವೀಯ ಮೌಲ್ಯ ಮೈಗೂಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ನಮ್ಮದಾಗಲಿದೆ. ಪ್ರಸ್ತುತ ದಿನಮಾನಗಳಲ್ಲಿ ವೈದ್ಯರ ಮೇಲೆ ನಂಬಿಕೆ ಇಡುವುದು, ಹಲ್ಲೆ ಮಾಡುವುದು ಎರಡೂ ಸಾಮಾನ್ಯವಾಗಿದೆ’ ಎಂದರು.

ಸಂಸ್ಕೃತ ವಿದ್ವಾಂಸರಾದ ಕೆ.ಲೀಲಾ ಪ್ರಕಾಶ್‌ ಮಾತನಾಡಿದರು. ವೈದ್ಯರನ್ನು ಸನ್ಮಾನಿಸಲಾಯಿತು. ಧನ್ವಂತರಿ ಸಂಬಂಧ ಅನುಭವಗಳ ಹಂಚಿಕೆ, ಚಟುಕು, ಹನಿಗವನ, ಮುಕ್ತಕ, ಕವಿಗೋಷ್ಠಿ, ಲಲಿತ ಪ್ರಬಂಧ, ಗೀತ ಗಾಯನ, ಆಧುನಿಕ ವಚನ, ಹಾಸ್ಯ ಪ್ರಸಂಗ, ನ್ಯಾನೊ ಕತೆಗಳ ಅನಾವರಣ ನಡೆಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಮ.ನ.ಲತಾ ಮೋಹನ್, ಅಂತರರಾಷ್ಟ್ರೀಯ ಬಯೋವೆಲ್ಲಾ ತರಬೇತುದಾರ ಗುರುರಾಜ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಹೇಮಲತಾ ಕುಮಾರಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT