ಪಿರಿಯಾಪಟ್ಟಣ: ‘ಹೈನುಗಾರಿಕೆಯಿಂದ ಮಹಿಳೆಯರು ಆರ್ಥಿಕವಾಗಿ ಲಾಭ ಹೊಂದಬಹುದು’ ಎಂದು ಪಶು ವೈದ್ಯಾಧಿಕಾರಿ ಡಾ.ಮಧುಸೂದನ್ ತಿಳಿಸಿದರು.

ತಾಲ್ಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ದೊಡ್ಡ ಹೊನ್ನೂರು ಡೇರಿ ವತಿಯಿಂದ ಬುಧವಾರ ಆಯೋಜಿಸಿದ್ದ ಹೈನುಗಾರಿಕಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಹಸು ಸಾಕಾಣಿಕೆ ಲಾಭದಾಯಕ ಉದ್ಯೋಗ ಹಾಗೂ ಉದ್ಯಮವಾಗಿ ಬದಲಾಗಿದ್ದು, ವಿಮಾ ಸೌಲಭ್ಯ ಮಾಡಿಸಬೇಕು’ ಎಂದು ತಿಳಿಸಿದರು.

ಹಾಲಿನ ಗುಣಮಟ್ಟ, ಹಸು ಸಾಕಾಣಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುವ ಬಗ್ಗೆ ಮಾಹಿತಿ ನೀಡಿದರು.

ಹೈನುಗಾರಿಕೆ ಜೊತೆಗೆ ಉಪಕಸುಬುಗಳಾದ ನಾಟಿಕೋಳಿ, ಜೇನು ಹಾಗೂ ಕುರಿ ಸಾಕಾಣಿಕೆ ಬಗ್ಗೆ ತಿಳಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀರ್ಘಕೇಶಿ ಶಿವಣ್ಣ, ಡೇರಿ ಅಧ್ಯಕ್ಷರಾದ ದಾಕ್ಷಾಯಿಣಿ, ಗ್ರಾ.ಪಂ. ಸದಸ್ಯ ಹರೀಶ್, ಅಣ್ಣೇಗೌಡ, ಹಾಲು ಒಕ್ಕೂಟದ ಕಾರ್ಯದರ್ಶಿ ಜಯಂತಿ, ಒಕ್ಕೂಟದ ಅಧ್ಯಕ್ಷರಾದ ಸವಿತಾ, ಮೇಲ್ವಿಚಾರಕರಾದ ಪ್ರೇಮಾ, ತಾಲ್ಲೂಕು ಕೃಷಿ ಅಧಿಕಾರಿ ಕೇಶವಗೌಡ, ಸೇವಾ ಪ್ರತಿನಿಧಿ ಮಂಜುಳಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.