ಮೈಸೂರು: ‘ಕಲಿಕಾ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು, ಕೌಶಲಕ್ಕೂ ಆದ್ಯತೆ ನೀಡಬೇಕು. ಇದರಿಂದ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ’ ಎಂದು ಕರ್ನಾಟಕ ಕೌಶಲಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.

ನಗರದ ಕೆಎಎಸ್ಒಯು ಕಾವೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಮಂಗಳವಾರ ನಡೆದ ಯುಜಿಸಿ ನೆಟ್- ಕೆಸೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣದೊಂದಿಗೆ ಕೌಶಲವಿದ್ದರೆ ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಬೇಕು. ಕಲಿಕೆಯಲ್ಲಿ ಎಐ (ಕೃತಜ ಬುದ್ದಿಮತ್ತೆ) ಬಳಸಿಕೊಳ್ಳಬೇಕು ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲು ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಚರ್ಚೆಗಳಾಗಿ ನೂತನ ಯೋಜನೆಗಳು ಅನುಷ್ಠಾನಗೊಂಡಿವೆ. ಈ ಮೂಲಕ ಕ್ಯಾಂಪಸ್ ನೇರ ನೇಮಕಾತಿಗಳಲ್ಲಿ ಕೌಶಲವಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿವೆ ಎಂದು ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ‘ಶಿಕ್ಷಣದಲ್ಲಿ ಕೌಶಲ ಅತ್ಯಂತ ಪೂರಕವಾಗಿದೆ. ಕೌಶಲ ಕೇಂದ್ರವು ಗ್ರಾಮೀಣ ಭಾಗದ ಯುವಜನರ ಸಾಧನೆಗೆ ಆಶಾಕಿರಣ ಹಾಗೂ ಬೆನ್ನೆಲುಬಾಗಿ ನಿಂತಿದೆ. ಶಿಕ್ಷಣದಿಂದ ಮಾತ್ರ ಎಲ್ಲ ಎಲ್ಲೆ ಮೀರಲು ಸಾಧ್ಯ’ ಎಂದು ಹೇಳಿದರು.

ಅವಕಾಶ ವಂಚಿತರಿಗೆ, ಉನ್ನತ ಶಿಕ್ಷಣ ವಿಸ್ತರಿಸುವ, ಒದಗಿಸುವ ಕೆಲಸವಾಗುತ್ತಿದೆ. ಸಮಾಜ, ಸಮುದಾಯ, ಕೈಗಾರಿಕೆ, ಸಂಸ್ಥೆಗಳ ನಡುವೆ ನಂಟು ಬೆಳೆಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳ ಕಲಿಕೆಯು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗಬೇಕಿದೆ. ಇವತ್ತು ತಂತ್ರಜ್ಞಾನಗದಲ್ಲಿ ಬದುಕುತಿದ್ದು, ಕೃತಕ ಬುದ್ಧಿಮತ್ತೆಯು ನಮ್ಮೆಲ್ಲ ಬದುಕು, ಕ್ಷೇತ್ರವನ್ನು ಆವರಿಸಿದೆ. ಎಲ್ಲ ವಿಚಾರ, ವಿಷಯಗಳು ಅಂಗೈನಲ್ಲೆ ಸಿಗುವ ಅವಕಾಶ ಒದಗಿಸಿದೆ. ಈ ಯುಗದಲ್ಲಿ ಬೋಧನೆ, ಸಂಶೋಧನೆ, ಕಲಿಕೆ ಎಲ್ಲವೂ ದೊಡ್ಡ ಸವಲಾಗಿದೆ ಎಂದರು.

ವಿದ್ಯಾರ್ಥಿಗಳು ಬದುಕಿನಲ್ಲಿ ಮಾನವೀಯತೆ, ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕು. ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರೂ ಹಾಗೂ ಶಿಕ್ಷಣದ ಪಾತ್ರ ಹೆಚ್ಚಿದೆ ಎಂದರು.

ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಎನ್.ಆರ್.ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಬಿ.ಗಣೇಶ್ ಕೆ.ಜಿ. ಕೊಪ್ಪಲ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಣಗೌಡ ಇದ್ದರು.

ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿ ಜೊತೆಗೆ ಸಮಯ ಪರಿಪಾಲನೆಯೂ ಮುಖ್ಯ. ಆತ್ಮವಿಶ್ವಾಸ ರೂಢಿಸಿಕೊಳ್ಳಿ. ನಿಮ್ಮ ಶ್ರಮದ ಮೇಲೆ ನಂಬಿಕೆಯಿರಲಿ
ಪ್ರೊ.ಶರಣಪ್ಪ ವಿ.ಹಲಸೆ ಕೆಎಸ್ಒಯು ಕುಲಪತಿ

‘ತಂತ್ರಜ್ಞಾನ ಅವಿಭಾಜ್ಯ ಅಂಗ‘

‘ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಜೀವನ ಅವಿಭಾಜ್ಯ ಅಂಗವಾಗಿದೆ. ಅಧುನಿಕ ಯುಗಕ್ಕೆ ತಂತ್ರಜ್ಞಾನ ಅಗತ್ಯ. ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕಿದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಶಿಷ್ಟತೆ ಇರಬೇಕು’ ಎಂದು ಮೈಸೂರು ವಿ.ವಿ ಕುಲಪತಿ ಪ್ರೊ.ಲೋಕನಾಥ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.