ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ವಿದ್ಯುತ್ ಅವಘಡ ರೈತ ಸಾವು

Published 27 ಏಪ್ರಿಲ್ 2024, 14:38 IST
Last Updated 27 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ಹುಣಸೂರು: ಬಿಳಿಕೆರೆ ಹೋಬಳಿ ರಾಮಪಟ್ಟಣದ ಸೋಮಶೇಖರ್ ಪುತ್ರ ಮಂಜು (35) ವಿದ್ಯುತ್ ಅವಘಡದಿಂದ ಶನಿವಾರ ಮೃತಪಟ್ಟರು.

ಘಟನೆ ವಿವರ: ಎಂದಿನಂತೆ ಬೆಳಿಗ್ಗೆ ಹೊಲದಲ್ಲಿ ಬೆಳೆದ ಫಸಲಿಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಕೆಲಸದಲ್ಲಿ ತೋಡಗಿದ್ದಾಗ 11 ಕೆ.ವಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ತಿಳಿಯದೆ ತುಳಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರ ಕುಟುಂಬದವರು ಬಿಳಿಕೆರೆ ದೂರು ದಾಖಲಿಸಿದ್ದಾರೆ. ಮೃತ ರೈತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆಗೆ ಬಿಳಿಕೆರೆ ಸೆಸ್ಕ್ ಎಇಇ ವಿಜಯರತ್ನ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT