ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ 34ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ವಿಳಂಬ ಮಾಡದೆ ಕೆರೆಗಳಿಗೆ ನೀರು ತುಂಬಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ‘ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು 4ನೇ ಹಂತದ ಕೆರೆಗಳಿಗೆ ನೀರು ತುಂಬಿಸದೆ ಬೆಲ್ಟ್, ಮೋಟಾರ್ ದುರಸ್ತಿ ನೆಪ ಹೇಳುವ ಮೂಲಕ ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹಲವು ರೈತರ ಜಮೀನುಗಳಲ್ಲಿ ಬೋರ್ ಕೆಟ್ಟು ಹೋಗಿದ್ದು, ಪಂಪ್ ಸೆಟ್ ಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಬೆಳೆಗಳು ಒಣಗುತ್ತಿದ್ದು, ಲಕ್ಷಾಂತರ ನಷ್ಟ ಉಂಟಾಗಲಿದೆ’ ಎಂದು ದೂರಿದರು.

‘ರೈತರು ವಲಸೆ ಹೋಗುವ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬಂದಿದೆ. ನ.15ರಂದು ಕೆರೆಗಳಿಗೆ ನೀರು ಬಿಡುವುದಾಗಿ ಗಡುವು ತೆಗೆದುಕೊಂಡಿದ್ದ ನೀರಾವರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಕೂಡಲೇ ನೇರವಾಗಿ ಹುತ್ತೂರು ಕೆರೆಗೆ ನೀರು ಹರಿಸಲು ಪ್ರಾರಂಭ ಮಾಡಬೇಕು. ಜೊತೆಗೆ 110 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶೀಘ್ರ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

‘ತಾಲೂಕಿನಲ್ಲಿ 3586 ಮಂದಿಗೆ ಸಾಗುವಳಿ ನೀಡಿಲ್ಲ. ಈ ಸಂಬಂಧ ಜಂಟಿ ಸರ್ವೇ ನಡೆಸುವುದಾಗಿ ಹೇಳಿದ ಕಂದಾಯ ಹಾಗೂ ಅರಣ್ಯ ಇಲಾಖೆ ವಿಳಂಬ ಮಾಡುತ್ತಿವೆ. ಬಂಡೀಪುರ ಸಫಾರಿಯನ್ನು ಪೂರ್ಣ ಬಂದ್ ಮಾಡಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಅಕ್ರಮ-ಸಕ್ರಮದಡಿ ಯೋಜನೆಯಡಿ ನೀಡುವಂತೆ ವಿದ್ಯುತ್ ನೀಡಬೇಕು. ಈ ಸಂಬಂಧ ಚೆಸ್ಕಾಂ ಎಂಡಿ ಸ್ಥಳಕ್ಕೆ ಬರಬೇಕು. ಕಾಡು ಪ್ರಾಣಿಗಳಿಂದಾದ ಫಸಲು ನಷ್ಟ, ಜಾನುವಾರು ಹತ್ಯೆಗೆ ಏಪ್ರಿಲ್ ನಿಂದ ಇಲ್ಲಿಯವರೆಗೆ 724 ಮಂದಿ ರೈತರಿಗೆ ಪರಿಹಾರದ ಹಣ ಬಂದಿಲ್ಲ. ಸೋಲಾರ್ ಪೆನ್ಸ್ ಅರ್ಜಿ ಹಾಕಿದರೂ ಕೊಡುತ್ತಿಲ್ಲ. ವಿದ್ಯುತ್ ಹಳೇ ಬಾಕಿ ಕಟ್ಟದಿರುವ ಮನೆಗಳ ಸಂಪರ್ಕ ಕಡಿತ ಮಾಡುತ್ತಿದ್ದಾರೆ ಕೂಡಲೇ ನಿಲ್ಲಿಸಬೇಕು’ ಎಂದು ಮನವಿ ಮಾಡಿದರು.

ನೀರಾವರಿ ಇಲಾಖೆ ಎಇ ರಘುನಾಥ್ ಮಾತನಾಡಿ, ‘ಎರಡು ದಿನದೊಳಗೆ ಮೋಟರ್ ದುರಸ್ತಿ ಪಡಿಸಿ ಕೆರೆಗಳಿಗೆ ನೀರು ಬಿಡಲು ಪ್ರಾರಂಭ ಮಾಡಲಾಗುವುದು. ಡಿಸೆಂಬರ್ ಮೊದಲ ವಾರದಲ್ಲಿ 4ನೇ ಹಂತದ ಹುತ್ತೂರು ಕೆರೆಗೆ ನೀರು ಬರಲಿದ್ದು, ಎರಡು ತಿಂಗಳೊಳಗೆ ತಾಲೂಕಿನ ಎಲ್ಲಾ ಕೆರೆಗಳು ತುಂಬಲಿದೆ’ ಎಂದು ತಿಳಿಸಿದರು. ಈ ವೇಳೆ ಆಕ್ರೋಶಗೊಂಡ ರೈತರು ತಮಡಹಳ್ಳಿ, ಕೆರೆಹಳ್ಳಿ ಕೆರೆಗಳಿಗೆ ಈಗಾಗಲೇ ಹಲವು ಬಾರಿ ನೀರು ತುಂಬಿಸಿದ್ದೀರಿ. ಅದನ್ನು ಬಿಟ್ಟು ನೇರವಾಗಿ ತಾಲೂಕಿನ ಹುತ್ತೂರು ಕೆರೆಗೆ ನೀರು ಬರುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ‘ಕೆರೆಗಳಿಗೆ ನೀರು ತುಂಬಿಸದ ಕಾರಣ ರೈತರು ಬೇಸತ್ತಿದ್ದಾರೆ. ವಿಳಂಬ ಮಾಡದೆ ರಾತ್ರಿ ಹಗಲೆನ್ನದೆ ಕೆಲಸ ಮಾಡಿ ಮೋಟರ್ ದುರಸ್ತಿ ಪಡಿಸಿ, ಎರಡು ದಿನದೊಳಗೆ ಕೆರೆಗಳಿಗೆ ನೀರು ಹರಿಸಲು ಆರಂಭಿಸಿ. ಈ ಸಂಬಂಧ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಹೆಚ್ಚುವರಿ ಮೋಟರ್ ಇಟ್ಟುಕೊಂಡು ಕಾರ್ಯನಿರ್ವಹಿಸಿ’ ಎಂದು ಸೂಚಿಸಿದರು. ವಿದ್ಯುತ್ ಹಳೇ ಬಾಕಿ ಕಟ್ಟದಿರುವ ಮನೆಗಳ ಸಂಪರ್ಕ ಕಡಿತ ಮಾಡದಂತೆ ದೂರವಾಣಿ ಮೂಲಕ ಚೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.

‘ಸಾಗುವಳಿ ನೀಡುವ ಸಂಬಂಧ ರೈತರ ಅರ್ಜಿ ತಿರಸ್ಕೃತವಾಗಿದ್ದರೆ ದಾಖಲೆ ಕೊಡಿ ಪುನರ್ ಪರಿಶೀಲನೆ ನಡೆಸುತ್ತೇವೆ. ಅರಣ್ಯ ಸಮಸ್ಯೆಯಿಂದ ವಿಳಂಭವಾಗುತ್ತಿದ್ದು, ಎರಡು ತಿಂಗಳೊಳಗೆ ಶೇ.80ರಷ್ಟು ಸಾಗುವಳಿ ನೀಡಲು ಕ್ರಮ ವಹಿಸಲಾಗುವುದು. ಇನ್ನು ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಹಾಗೂ ಜಾನುವಾರು ಹತ್ಯೆ ಪರಿಹಾರ ಹಣ ಶೀಘ್ರ ಬಿಡುಗಡೆ ಮಾಡುವಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಧರಣಿ ವಾಪಸ್ ಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು. ಕೆರೆಗಳಿಗೆ ನೀರು ಹರಿಸುವುದು, ರೈತರಿಗೆ ಸಾಗುವಳಿ ವಿತರಣೆ ಮಾಡುವ ಬೇಡಿಕೆ ಈಡೇರುವವರೆಗ ಧರಣಿ ಮುಂದುವರೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಎಡಿಸಿ ಜವರೇಗೌಡ, ತಹಸೀಲ್ದಾರ್ ತನ್ಮಯ್, ನೀರಾವರಿ ಇಲಾಖೆ ಎಂಜಿನಿಯರ್, ಮಹೇಶ್, ಎಎಸ್ಪಿ ಶಶಿಧರ್, ರೈತ ಸಂಘದ ತಾಲೂಕು ಅಧ್ಯಕ್ಷ ದಿಲೀಪ್, ಶಿವಮಲ್ಲು, ಲೋಕೇಶ್, ಮಲ್ಲಯ್ಯನಪುರ ಶಿವಣ್ಣ, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.