ಸರಗೂರು: ಜೋರೆಹಳ್ಳ ಗ್ರಾಮಕ್ಕೆ ಇದುವರೆಗೆ ಸಾರಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಶಾಸಕರಿಗೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಡಿದ ಮನವಿಗೆ ಸ್ಪಂದಿಸಿ, ಬಸ್ ಪ್ರಾರಂಭಿಸಲಾಯಿತು. ಬಸ್ಗೆ ಪೂಜೆ ಸಲ್ಲಿಸಲಾಯಿತು.

ಮುಖಂಡ ದೇವಲಾಪುರ ನಾಗೇಂದ್ರ ಮಾತನಾಡಿ, ‘ಸರಗೂರು ಪಟ್ಟಣದಿಂದ ಸಾಗರೆ, ಚನ್ನೀಪುರ, ಹೆಗ್ಗನೂರು ಮಾರ್ಗವಾಗಿ ಜೋರೆಹಳ್ಳ ಗ್ರಾಮಗಳಿಗೆನು ಸಂಪರ್ಕ ಕಲ್ಪಿಸುವಬಸ್ ಈ ಭಾಗದ ಜನರ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಅನಿಲ್ ಚಿಕ್ಕಮಾದು, ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಕಲ್ಪಿಸಿದ್ದಾರೆ’ ಎಂದರು.

ಬಸ್ ಇಲ್ಲದಿದ್ದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಜೋರೆಹಳ್ಳ ದಿಂದ ನಾಲ್ಕೈದು ಕಿ. ಮೀ ದೂರದಲ್ಲಿರುವ ಜೋರೆಹಳ್ಳ ಗೇಟ್ ಬಳಿ ಬಿ.ಮಟಕರೆ ಹಾಗೂ ಹಂಚೀಪುರ ಮಾರ್ಗವಾಗಿ ಬರುವ ಬಸ್ ಮೂಲಕ ಪಟ್ಟಣಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈಗ ಸರಗೂರು ಪಟ್ಟಣ ದಿಂದ ಚನ್ನೀಪುರ ಗ್ರಾಮ, ಹೆಗ್ಗನೂರು ಮಾರ್ಗವಾಗಿ ಜೋರೆಹಳ್ಳಕ್ಕೆ ಬಸ್ ಸಂಚಾರ ಆರಂಭವಾಗಿದೆ. ನಿತ್ಯ ಮೂರು ಬಾರಿ ಜೋರೆಹಳ್ಳ ಗ್ರಾಮಕ್ಕೆ ಬಸ್ ಬರಲಿದೆ ಎಂದರು.

ಗ್ರಾಮಸ್ಥ ಪ್ರಸಾದ್ ಪ್ರತಿಕ್ರಿಯಿಸಿ, ಬಸ್ ಆರಂಭವಾಗಿದೆ. ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಐದಾರು ಕಿ.ಮೀ ದೂರ ನಡೆಯಬೇಕಿತ್ತು. ಶಾಲೆಗೆ ಮಕ್ಕಳು ಬಸ್ನಲ್ಲೇ ತೆರಳಲಿದ್ದಾರೆ ಎಂದರು.

ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು ಮಾತನಾಡಿದರು. ಸಮುದಾಯದ ಯಜಮಾನ ರಂಗಯ್ಯ, ಚಿಕ್ಕಣ್ಣ, ಗ್ರಾಮದ ಮುಖಂಡ ವಿಷಕಂಠ, ಶ್ರೀನಿವಾಸ, ನಾಗಯ್ಯ, ಸೋಮಣ್ಣ ನಾಗೇಂದ್ರ, ರಾಮು, ಸಿದ್ದಯ್ಯ, ಚಿನ್ನಯ್ಯ, ಸೋಮಯ್ಯ, ಕೃಷ್ಣೇಗೌಡ, ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.