ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಮೈಸೂರಿಗರ ಪ್ರೀತಿಗೆ ಶರಣಾದ ವಿದೇಶಿಗರು

Published 25 ಅಕ್ಟೋಬರ್ 2023, 4:34 IST
Last Updated 25 ಅಕ್ಟೋಬರ್ 2023, 4:34 IST
ಅಕ್ಷರ ಗಾತ್ರ

ಮೈಸೂರು: ‘ಇಟ್ ಇಸ್ ಆ ರಿಚ್ ಕಲ್ಚರ್ (ಇದೊಂದು ಶ್ರೀಮಂತ ಸಂಸ್ಕೃತಿ)’ ಎಂದು ರೆಮ್ಕೋ ದಸರಾವನ್ನು ಬಣ್ಣಿಸುವಾಗ ಅವರ ಕಣ್ಣುಗಳಲ್ಲಿ ಭಾರತ ಹಾಗೂ ಮೈಸೂರಿನ ಬಗೆಗಿನ ಪ್ರೀತಿ ಕಾಣುತ್ತಿತ್ತು.

ಅವರು ಜಂಬೂಸವಾರಿ ವೈಭವವನ್ನು ವೀಕ್ಷಿಸಲು ನೆದರ್ಲೆಂಡ್‌ನಿಂದ ಪತ್ನಿ ಹಾಗೂ ಮಗಳೊಂದಿಗೆ ಬಂದಿದ್ದರು. ‘ಮೈಸೂರಿನ ರಾಜ ಪರಂಪರೆಯನ್ನು ಗೈಡ್ ಮೂಲಕ ತಿಳಿದಿದ್ದೆ. ರೋಮಾಂಚನಕಾರಿ ಹಿನ್ನೆಲೆಯುಳ್ಳ ಒಡೆಯರ್ ಅವರ ಇತಿಹಾಸಕ್ಕೆ ದಸರಾ ಶೋಭೆ ತುಂಬಿದೆ. ಎರಡನೇ ಬಾರಿ ಜಂಬೂ ಸವಾರಿ ವೀಕ್ಷಿಸುತ್ತಿದ್ದು, ಇಲ್ಲಿನ ಜನರ ಭಾಗವಹಿಸುವಿಕೆಯೇ ಪ್ರೇರಣಾದಾಯಿ’ ಎಂದು ತಿಳಿಸಿದರು.

ಅಮೆರಿಕ, ಜರ್ಮನಿ, ಯುಗೋಸ್ಲೋವಿಯಾದಿಂದ ಬಂದ ವಿದೇಶಿಗರು ಮೆರವಣಿಗೆ ಕಣ್ತುಂಬಿಕೊಂಡರು. ನಿವೃತ್ತ ಸೈನಿಕರಿಂದ ಆಯುರ್ವೇದ ಆಸ್ಪತ್ರೆ ಬಳಿ ವಿದೇಶಿ ಪ್ರವಾಸಿಗರಿಗಾಗಿ ಮಾಡಿದ್ದ ಗ್ಯಾಲರಿಯಲ್ಲಿ ಸುಮಾರು 50ರಷ್ಟು ಜನರಿದ್ದರು. ಇವಿಷ್ಟೇ ಅಲ್ಲದೆ ಜನರ ನಡುವೆಯೂ ಅನೇಕರು ನಿಂತು ವೈಭವವನ್ನು ವೀಕ್ಷಿಸಿದರು.

ಈ ಮೆರವಣಿಗೆಯು ಮೈಸೂರು ಸಾಂಸ್ಕೃತಿಕ ನಗರಿ ಎಂಬುದನ್ನು ಬಿಂಬಿಸಿದೆ. ಅಂಬಾರಿ ನೋಡಲು ಮುಂದಿನ ವರ್ಷವೂ ಬರುತ್ತೇವೆ.
ಜೂಲಿ ಜರ್ಮನಿ

‘ಅರ್ಜುನ’ ಹಾಗೂ ‘ಭೀಮ’ ಆನೆಯು ಸೊಂಡಿಲೆತ್ತಿದಾಗ ಚಪ್ಪಾಳೆ ತಟ್ಟಿ ಖುಷಿಪಟ್ಟರು. ಇಲ್ಲಿನ ಸಂಸ್ಕೃತಿ, ಸ್ತಬ್ಧಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಅನೇಕ ಯೂಟ್ಯೂಬ್‌ ವ್ಲಾಗರ್‌ಗಳೂ ಭಾಗವಹಿಸಿದ್ದು ಕಂಡುಬಂತು.

ಮೊದಲ ಬಾರಿಗೆ ಜಂಬೂಸವಾರಿ ಮೆರವಣಿಗೆ ನೋಡಿದ್ದು ಅದ್ಭುತ ಅನುಭವ. ಮೈಸೂರು ನಿಜಕ್ಕೂ ಅಚ್ಚರಿಗಳ ನಗರ.
ಬೆಂಜಮಿನ್‌ ಜರ್ಮನಿ

‘ಮೈಸೂರು ನಗರ ಇತರೆಡೆಗಿಂತ ಭಿನ್ನವಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳು ಎಲ್ಲರನ್ನೂ ಆಕರ್ಷಿಸುವಂತಿವೆ. ದೀಪಾಲಂಕಾರ ಮಾಡಿರುವುದರಿಂದ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ’ ಎಂದು ಜರ್ಮನ್‌ನಿಂದ ಬಂದಿರುವ ಟಿಮಾನ್ ಖುಷಿ ಹಂಚಿಕೊಂಡರು.

‘ಇಲ್ಲಿನ ಜನ ಭಾವನಾತ್ಮಕ ಜೀವಿಗಳು. ಹೀಗಾಗಿ ಇಲ್ಲಿ ಬರಲು ಹೆಚ್ಚು ಇಷ್ಟಪಡುತ್ತೇವೆ. ಜಂಬೂಸವಾರಿ ರೀತಿ ಕಾರ್ಯಕ್ರಮ ವಿರಳ. ಗೂಗಲ್‌ನಲ್ಲಿ ಮಾಹಿತಿ ಪಡೆದು ಬಂದಿದ್ದೇನೆ. ಈ ವೈಭವ ಕಂಡು ಪುಳಕಿತನಾಗಿದ್ದೇನೆ’ ಎಂದು ಅಮೆರಿಕದ ಡೇವಿಡ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT