ಮೈಸೂರು: ‘ಅರಣ್ಯ ಹಾಗೂ ಪರಿಸರ ನಾಶದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು’ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಹೇಳಿದರು.

ನಿವೃತ್ತ ಅರಣ್ಯಾಧಿಕಾರಿಗಳ ಸಂಘದಿಂದ ನಗರದ ರೇಸ್ಕ್ಲಬ್ನಲ್ಲಿ ಇಬ್ಬರು ಮಹಿಳಾ ಐಎಫ್ಎಸ್ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಅರಣ್ಯ ನಾಶದ ಪರಿಣಾಮವನ್ನು ನಾವು ವನ್ಯಜೀವಿ ಹಾಗೂ ಮಾನವ ಸಂಘರ್ಷದ ರೂಪದಲ್ಲಿ ನೋಡುತ್ತಿದ್ದೇವೆ. ಅರಣ್ಯ ಹರಿದು ಹಂಚಿ ಹೋಗಿ ಸಂಘರ್ಷ ಪರಾಕಾಷ್ಠತೆಯನ್ನು ತಲುಪಿ ಜನ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಂಡರೆ ಮಾತ್ರ ಅರಣ್ಯ, ವನ್ಯಜೀವಿಗಳು ಉಳಿದು ನಾಡು ರಕ್ಷಣೆಯಾಗಲಿದೆ. ಜನರು ನೆಮ್ಮದಿಯಿಂದ ಇರಬೇಕೆಂದರೆ ಅರಣ್ಯ ಸಂರಕ್ಷಣೆ ಬಹಳ ಮುಖ್ಯವಾಗುತ್ತದೆ. ವಿಜ್ಞಾನಿಗಳು, ಅರಣ್ಯ ಸಂರಕ್ಷಕರು, ಆಡಳಿತಗಾರರು ಇದಕ್ಕಾಗಿ ಸಹಭಾಗಿತ್ವ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದರು.

‘ಅರಣ್ಯ ಇಲಾಖೆಯಲ್ಲಿ ಹಲವು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಸಿಬ್ಬಂದಿಯೂ ಕೈಜೋಡಿಸಿ ಕೆಲಸ ಮಾಡಿದ್ದರಿಂದಲೇ ದೇಶದಲ್ಲಿ ಕರ್ನಾಟಕದ ಅರಣ್ಯಕ್ಕೆ ತನ್ನದೇ ಆದ ಮಹತ್ವವಿದೆ. ಈಗಿನ ತಲೆಮಾರಿನ ಹಲವು ಅಧಿಕಾರಿಗಳು ಅದೇ ರೀತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಂತಹ ಒತ್ತಡ ಬಂದರೂ ಸಂಯಮ, ಸಮಚಿತ್ತತೆ, ಸ್ನೇಹಮಯವಾಗಿ ಕೆಲಸ ಮಾಡುವುದು. ಮುಂದಾಳತ್ವ ವಹಿಸುವುದು ಅತಿಮುಖ್ಯ’ ಎಂದು ಹೇಳಿದರು.

‘ಅರಣ್ಯ ಇಲಾಖೆಯಲ್ಲಿ ಹಲವು ವರ್ಷ ಕೆಲಸ ಮಾಡಿದ ಚಂಗಪ್ಪ ಮೈಸೂರು ರೇಸ್ಕ್ಲಬ್ ಸ್ಟೀವರ್ಡ್ ಆಗಿ ಆಯ್ಕೆಯಾಗಿರುವುದು ಸಂತಸದ ವಿಚಾರ’ ಎಂದರು.

ನಿವೃತ್ತ ಅರಣ್ಯಾಧಿಕಾರಿಗಳಾದ ಎಂ.ಕೆ.ಅಪ್ಪಯ್ಯ, ಟಿ..ಬಾಲಚಂದ್ರ, ಯಾಲಕ್ಕಿ, ಎಚ್.ಸಿ.ಕಾಂತರಾಜು, ಶ್ರೀಧರ್, ರಾಮಲಿಂಗೇಗೌಡ, ನಾಗರಾಜ ಆಚಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.