ತಿ.ನರಸೀಪುರ: ತಾಲ್ಲೂಕಿನ ಪ್ರವಾಸೋದ್ಯಮ ಕ್ಷೇತ್ರವಾದ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆಯು ಸಚಿವ ಸಂಪುಟದ ನಿರ್ಧಾರದ ಮೂಲಕ ಈಡೇರಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಬೆಳವಣಿಗೆಯು ಗ್ರಾಮದ ಜನರಲ್ಲಿ ಸಂತಸ ತಂದಿದೆ.

ತಾಲ್ಲೂಕಿನ ಐತಿಹಾಸಿಕ ಗಜಾರಣ್ಯ ಕ್ಷೇತ್ರದ ಪಂಚಲಿಂಗಗಳ ನಾಡು ತಲಕಾಡು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸೌಲಭ್ಯ ವಿಸ್ತರಣೆಗಾಗಿ ಪಟ್ಟಣ ಪಂಚಾಯಿತಿ ಮಾಡಬೇಕೆಂಬ ಬೇಡಿಕೆ ಇತ್ತು.

ತಲಕಾಡು ಮತ್ತು ವಡೆಯಾಂದಹಳ್ಳಿ ಸೇರಿ 9 ವಾರ್ಡ್ಗಳ ಗ್ರಾಮ ಪಂಚಾಯಿತಿಯಾಗಿದ್ದ ತಲಕಾಡನ್ನು ಮೇಲ್ದರ್ಜೆಗೇರಿಸಲು ಒಂದೂವರೆ ದಶಕಗಳಿಂದ ಎರಡು- ಮೂರು ಬಾರಿ ಪ್ರಯತ್ನ ನಡೆದಿತ್ತು. ಜನಸಂಖ್ಯೆಯ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಪ್ರಸ್ತಾವ ಸರ್ಕಾರ ಮಟ್ಟ ತಲುಪದೇ ವಾಪಸ್ ಆಗಿತ್ತು.

ಈಗ ಬಿ. ಶೆಟ್ಟಹಳ್ಳಿ ಪಂಚಾಯಿತಿಯ ಕೂರಬಾಳನ ಹುಂಡಿ ಗ್ರಾಮ ಹಾಗೂ ಟಿ. ಬೆಟ್ಟಹಳ್ಳಿ ಗ್ರಾಮವನ್ನು ಸೇರಿಸಿ ಜನಸಂಖ್ಯೆಯ ಸಮಸ್ಯೆಯನ್ನು ನಿವಾರಿಸಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಪೂರಕವಾದ ಎಲ್ಲಾ ದಾಖಲೆಗಳನ್ನು ನೀಡಿದ್ದರ ಫಲವಾಗಿ ಹಾಗೂ ಇಲಾಖೆಗಳ ಸಹಕಾರ, ಸಚಿವರು ಹಾಗೂ ಸಂಸದರ ಒತ್ತಾಸೆಯ ಫಲವಾಗಿ ಗ್ರಾಮ ಪಂಚಾಯಿತಿ ಆಡಳಿತದ ಸಹಕಾರದಿಂದಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಅನುಮೋದನೆ ದೊರಕಿದೆ.

ತಲಕಾಡು ವಡೆಯಾಂದಹಳ್ಳಿ ಮತ್ತು ತಲಕಾಡು ಜತೆಗೆ ಕೂರಬಾಳನಹುಂಡಿ, ಬೆಟ್ಟಹಳ್ಳಿಗಳ 2,754 ಜನ ಸೇರಿ ಪ್ರಸ್ತುತ 16 ಸಾವಿರ ಜನಸಂಖ್ಯೆ ಇದೆ.

‘ಪ್ರಸ್ತಾಪಿತ ವ್ಯಾಪ್ತಿಯು ವಿಶ್ವವಿಖ್ಯಾತ ತಲಕಾಡು ಪಂಚಲಿಂಗದರ್ಶನ ಮತ್ತು ಕಾವೇರಿ ನಿಸರ್ಗಧಾಮ ಪ್ರವಾಸಿ ತಾಣವಾಗಿದ್ದು, ಹೆಚ್ಚು ಪ್ರವಾಸಿಗರು ಬರುವುದರಿಂದ ವ್ಯಾಪಾರ ಹೆಚ್ಚಾಗಲಿದೆ. ಜನಸಂಖ್ಯೆ ಬೆಳವಣಿಗೆಯಿಂದ ನಗರ ಪ್ರದೇಶವಾಗಿ ಪರಿವರ್ತನೆಗೊಂಡಿರುವುದರಿಂದ ಮೇಲ್ದರ್ಜೆಗೇರಿಸುವುದು ಅತ್ಯಗತ್ಯ’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಪಟ್ಟಣ ಪಂಚಾಯಿತಿ ಮಾಡಲು 2006ರಿಂದಲೂ ಪ್ರಸ್ತಾವ ಸಲ್ಲಿಸುತ್ತಿದ್ದರೂ ಸರ್ಕಾರದ ಹಂತ ತಲುಪಿರಲಿಲ್ಲ. ಬಳಿಕ ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಅವರ ಗಮನ ಸೆಳೆಯಲಾಯಿತು. ಅವರು ಅಗತ್ಯ ದಾಖಲೆಗಳನ್ನು ಇಲಾಖಾವಾರು ಒದಗಿಸುವಂತೆ ಸೂಚಿಸಿದ್ದರು.

‘ಎರಡು ಗ್ರಾಮಗಳ ಸೇರ್ಪಡೆ ಸ್ವಾಗತಾರ್ಹ’

‘ಬಿ.ಶೆಟ್ಟಳ್ಳಿ ತಲಕಾಡು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ತಹಶೀಲ್ದಾರ್ ಇಒ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಅಭಿವೃದ್ಧಿ ದೃಷ್ಟಿಯ ಬಗ್ಗೆ ಶೆಟ್ಟಹಳ್ಳಿ ಪಂಚಾಯಿತಿ ಸದಸ್ಯರ ಮನವೊಲಿಸಿ ಎರಡು ಗ್ರಾಮಗಳನ್ನು ಗ್ರಾಮ ಪಂಚಾಯಿತಿಗೆ ಸೇರಿಸಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ. ಸಚಿವರು ಸಂಸದರು ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ನೀಡಿದ ತಾಲ್ಲೂಕಿನ ಅಧಿಕಾರಿಗಳು ಧನ್ಯವಾದ ತಿಳಿಸುತ್ತೇನೆ’ ಎಂದು ತಲಕಾಡು ಸಮೂಹ ದೇವಾಲಯಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ಬೆಟ್ಟಹಳ್ಳಿ ನಾಗರಾಜು ತಿಳಿಸಿದರು.

ಮೇಲರ್ಜೆಗೇರಿದರೆ ಆಗುವ ಪ್ರಯೋಜನ

ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಠಿ ಮೂಲ ಸೌಲಭ್ಯಗಳು ದೊರೆತು ಪ್ರವಾಸಿಗರ ಸಂಖ್ಯೆ ಹೆಚ್ಚಳ ವ್ಯಾಪಾರ ವಹಿವಾಟು ವೃದ್ಧಿಯಾಗಿ ಸ್ಥಳೀಯ ಆಡಳಿತಕ್ಕೆ ಆದಾಯ ಹೆಚ್ಚಾಗಬಹುದು ಪ್ರವಾಸಿ ತಾಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.