ಮೈಸೂರು: ‘ಪ್ರತಿಯೊಬ್ಬರೂ ಅವರವರ ಧರ್ಮದ ಆಚರಣೆಗಳನ್ನು ಮಾಡಬೇಕು. ಇನ್ನೊಂದು ಧರ್ಮದ ಬಗ್ಗೆ ಉದಾತ್ತ ಭಾವ ಇದ್ದಾಗ ಮಾತ್ರವೇ ಸಮಾಜದಲ್ಲಿ ಸಾಮರಸ್ಯ ನೆಲೆಸಲು ಸಾಧ್ಯ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಶ್ರೀರಾಂಪುರದ ‘ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ’ಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ಸಮಾರಂಭದಲ್ಲಿ ಮಾತನಾಡಿ, ‘ಸಮಾಜದಲ್ಲಿ ಸಾಮರಸ್ಯದಿಂದ ಬಾಳುವುದೇ ಎಲ್ಲರ ಜೀವನದ ಗುರಿಯಾಗಬೇಕು’ ಎಂದರು.

‘ಬದುಕಿಗೆ ಆದರ್ಶ ಮಾರ್ಗವನ್ನು ತೋರಲು ಗುರುವಿನ ಅವಶ್ಯಕತೆ ಇದೆ. ಜಗದ ಅಜ್ಞಾನದ ಕತ್ತಲೆ ಕಳೆಯಲು ಗುರುವಿನ ಬೋಧನೆ ಅತ್ಯಂತ ಅವಶ್ಯ’ ಎಂದು ಹೇಳಿದರು.

ನಿತ್ಯ ನೆನೆಯಬೇಕು:

‘ಪ್ರಾಚೀನ ಕಾಲದಲ್ಲಿ ರೇಣುಕಾಚಾರ್ಯರು ಹೇಳಿದ ಧರ್ಮದ ಸೂತ್ರಗಳನ್ನು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ‘ಕಳಬೇಡ– ಕೊಲಬೇಡ’ ಎಂದು ಸಾರಿದರು. ಶಿವಪಥವನ್ನು ಅರಿಯಲು ಗುರು ಪಥವು ಬೇಕು ಎಂಬ ಗಟ್ಟಿ ಮಾತುಗಳನ್ನು ಹೇಳಿದ್ದರು. ದೇವರು ಕೊಟ್ಟ ಕೊಡುಗೆಯನ್ನು ಗುರುವಲ್ಲದೇ ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ನಿಂತ ನೆಲ, ಕುಡಿಯುವ ನೀರು, ಉಸಿರಾಡುವ ಗಾಳಿ ಸೇರಿ ಎಲ್ಲಕೊಟ್ಟಿರುವ ದೇವರನ್ನು ನಿತ್ಯ ನೆನೆಯಬೇಕು’ ಎಂದರು.

‘ಮಾನವನ ಜೀವನ ಅಮೂಲ್ಯ. ಅದನ್ನು ವ್ಯರ್ಥಗೊಳಿಸಬಾರದು. ಜನ್ಮಜನ್ಮಗಳಲ್ಲಿ ಮಾಡಿದ ಪುಣ್ಯದ ಬುತ್ತಿಯಿಂದ ದೊರಕಿದ ಅವಕಾಶವೆಂದು ರೇಣುಕಾರ್ಚಾರ್ಯರು ಋಷಿ ಅಗಸ್ತ್ಯರಿಗೆ ಹೇಳಿದ್ದರು. ಶಿವಜ್ಞಾನ ಪಡೆಯದೇ, ಗುರು ಕಾರುಣ್ಯಕ್ಕೆ ಒಳಗಾಗದಿದ್ದರೆ ಜೀವನ ವ್ಯರ್ಥವಾಗುತ್ತದೆಂಬ ಎಚ್ಚರಿಕೆಯನ್ನು ನೆನಪು ಮಾಡಿಕೊಳ್ಳಬೇಕು. ಅದರಿಂದ ಬದುಕು ಉಜ್ವಲ ಆಗುತ್ತದೆ’ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಸಾಮೂಹಿಕವಾಗಿ ಸೇರಿರುವ ಕಾರಣಕ್ಕಾಗಿಯೇ ಸನಾತನ ಧರ್ಮವು ಜೀವಂತವಾಗಿ ಉಳಿದಿದೆ. ಹಿಂದೂ ಸಂಸ್ಕೃತಿಯ ಮೇಲೆ ಎಷ್ಟೇ ದಾಳಿಗಳಾದರೂ ಮಠಗಳಿಂದ ಧರ್ಮವು ನೆಲೆ ನಿಂತಿದೆ. ತಿರುಪತಿ, ಶಬರಿಮಲೆ, ಧರ್ಮಸ್ಥಳದ ಮೇಲೆ ಗದಾಪ್ರಹಾರವನ್ನು ನೋಡಿದ್ದೇವೆ. ಎಲ್ಲ ದುಷ್ಟಶಕ್ತಿಗಳ ವಿರುದ್ಧ ಹಿಂದೂ ಸಮಾಜ ಗಟ್ಟಿಯಾಗಿ ನಿಂತಿದೆ’ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಅಖಿಲ ಭಾರತದ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜ್, ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಬೆರಟಹಳ್ಳಿ ನಾಗರಾಜು, ಸೇವಾ ಸಂಸ್ಥೆ ಅಧ್ಯಕ್ಷ ಬಿ.ನ್.ಸುಧಾಕರ್ ಪಾಲ್ಗೊಂಡಿದ್ದರು.

- ‘ಯುವ ಸಮುದಾಯಕ್ಕೆ ಸಂಸ್ಕಾರ ಕೊಡಿ’

‘ಯುವ ಸಮುದಾಯವು ಇಷ್ಟಲಿಂಗವನ್ನು ದೇವರಮನೆ ಜಗಲಿ ಗೂಟಕ್ಕೆ ನೇತು ಹಾಕುತ್ತಿದೆ. ಗೂಟ ಜಗಲಿ ಪವಿತ್ರವಾಗುತ್ತಿದೆ. ಇಷ್ಟಲಿಂಗವನ್ನು ಎದೆ ಮೇಲೆ ಧರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಸಂಸ್ಕಾರವನ್ನು ಹಿರಿಯರು ಕಲಿಸಬೇಕು’ ಎಂದು ಜಪದಕಟ್ಟೆ ಮಠದ ಮುಮ್ಮಡಿ ಚಂದ್ರಶೇಖರ ಸ್ವಾಮೀಜಿ ಹೇಳಿದರು. ‘ಮೈಸೂರು ನಾಡದೇವತೆ ಹಬ್ಬ ದಸರಾ ಕಂಡರೆ ರಂಭಾಪುರಿ ಪೀಠದಲ್ಲಿ ಗುರುಮನೆಯ ದಸರಾ ದರ್ಬಾರ್ ನೋಡುತ್ತಿರುತ್ತೇವೆ. ಧರ್ಮ ರಕ್ಷಣೆಗಾಗಿ ಧಾರ್ಮಿಕ ಕಾರ್ಯಗಳನ್ನು ಸಾವಿರಾರು ವರ್ಷಗಳಿಂದ ಪೀಠವು ನಡೆಸುತ್ತಾ ಬಂದಿದೆ. ಗುರುವಾಣಿಯನ್ನು ಪಾಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.