ಚಿಪ್‌ಸನ್ ಹಾಗೂ ತುಂಬಿ ಏವಿಯೇಷನ್ ಕಂಪನಿಗಳಿಗೆ ಸೇರಿದ ತಲಾ ಒಂದೊಂದು ಹೆಲಿಕಾಪ್ಟರ್‌ಗಳಿವೆ. ಪ್ರತಿ ಹೆಲಿಕಾಪ್ಟರ್‌ನಲ್ಲಿ ತಲಾ 6 ಮಂದಿ ಪ್ರಯಾಣಿಸಬಹುದು. ಬೆಳಿಗ್ಗೆ 10ರಿಂದ ಸಂಜೆ ಸೂರ್ಯಾಸ್ತದವರೆಗೂ ಹಾರಾಟ ನಡೆಸಲಿವೆ. 8 ನಿಮಿಷಗಳ ಪ್ರಯಾಣವಿದ್ದು, ಪ್ರತಿ ವ್ಯಕ್ತಿಗೆ ₹2,700 ಶುಲ್ಕ ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್ ಹಾರಲು ಹಾಗೂ ನಿಲುಗಡೆ ಮಾಡಲು ಎರಡು ನಿಮಿಷ ತೆಗೆದುಕೊಳ್ಳಲಿದ್ದು, ಉಳಿದ ಆರು ನಿಮಿಷಗಳವರೆಗೆ ಆಗಸದಲ್ಲಿ ಹಾರಾಟ ನಡೆಸಲಾಗುತ್ತದೆ. ಚಾಮುಂಡಿ ಬೆಟ್ಟವನ್ನು ಸುತ್ತಿಕೊಂಡು ಅರಮನೆ, ವಸ್ತುಪ್ರದರ್ಶನ ಭಾಗದಲ್ಲಿ ಹಾರಾಟ ನಡೆಸಿ ಲಲಿತ ಮಹಲ್ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗಲಿದೆ.