ಮೈಸೂರು: ‘ ಧರ್ಮ, ಸಂಸ್ಕೃತಿ ಹಾಗೂ ಸಮಾಜದ ಸಮಾಗಮವೇ ಹಿಂದುತ್ವ. ಇದನ್ನು ಭಾರತೀಯ ಕಣ್ಣುಗಳಿಂದ ನೋಡಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಖಿಲ ಭಾರತ ಸಹ ಸಂಯೋಜಕ ರಘುನಂದನ್ ಹೇಳಿದರು.

ಮಾಧವ ಕೃಪಾ ಸಭಾಂಗಣದಲ್ಲಿ ಶನಿವಾರ ಮಂಥನ ಮೈಸೂರು ಸಂಸ್ಥೆಯು ಆಯೋಜಿಸಿದ್ದ ‘ಹಿಂದುತ್ವ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದುತ್ವ ಎನ್ನುವುದು ಗೊಂದಲವಿಲ್ಲದ, ರಾಜಿ ಇಲ್ಲದ ವಿಚಾರ. ಆರ್ಎಸ್ಎಸ್ ಹಿಂದುತ್ವ ಬೇರೆ ಇಲ್ಲ, ವಿವೇಕಾನಂದರ ಹಿಂದುತ್ವ ಬೇರೆ ಅಲ್ಲ. ಇದೆಲ್ಲ ನಮ್ಮ ಸಿದ್ಧಾಂತ ಒಪ್ಪಲಾರದವರು ಮಾಡಿದ ಕೂಟ’ ಎಂದರು.

‘ಹಿಂದುತ್ವಕ್ಕೆ ಪರ್ಯಾಯವಾಗಿ ನಮ್ಮಲ್ಲಿ ಆರ್ಯ, ಸನಾತನ ಮೊದಲಾದ ಶಬ್ದಗಳು ಬಳಕೆಯಲ್ಲಿವೆ. ಭಾರತ ಎಂದರೆ ಬೆಳಕನ್ನು ಆರಾಧಿಸುವವರು. ಇದೊಂದು ಸಂಸ್ಕೃತಿ ವಾಚಕ ಶಬ್ಧ. ಹಿಂದು ಎಂಬುದು ಭೂಮಿ ವಾಚಕ ಶಬ್ದ. ಆದರೆ ಅದು ಪ್ರಸ್ತುತ ಸಂಸ್ಕೃತಿ ವಾಚಕ ಆಗಿದೆ. ಯಾರು ಬೇಕಾದರೂ ಹಿಂದು ಆಗಬಹುದು. ಭೌದ್ಧ, ಜೈನ ಎಲ್ಲರೂ ಹಿಂದು. ಯಾರೂ ಬೇಕಾದರೂ ತಾನು ಹಿಂದು ಎಂದುಕೊಳ್ಳಬಹುದು. ಬುದ್ಧನಿಂದ ಹಿಡಿದು ಅಂಬೇಡ್ಕರ್ ವರೆಗೆ ಎಲ್ಲರೂ ನಮಗೆ ಆದರ್ಶಗಳೇ’ ಎಂದು ವಿವರಿಸಿದರು.

‘ಇಂಗ್ಲಿಷಿನ ರಿಲಿಜಿಯನ್ ಹಾಗೂ ಧರ್ಮ ಬೇರೆ. ಧರ್ಮ ಎಂದರೆ ಮೂಲತಃ ತತ್ವಗಳು. ನಮ್ಮ ಪೂಜಾ ಪದ್ಧತಿ, ಜೀವನ ಕ್ರಮವೇ ಬೇರೆ. ಅಧ್ಯಾತ್ಮ ಹಾಗೂ ಧರ್ಮ ಹಿಂದುತ್ವದ ಮೂಲ ಸಂಗತಿಗಳು. ಅಧ್ಯಾತ್ಮ ಎಂದರೆ ನನ್ನನ್ನು ನಾನು ತಿಳಿದುಕೊಳ್ಳುವುದು. ಧರ್ಮ ಯಾವಾಗಲೂ ಎಲ್ಲ ಕಾಲಕ್ಕೂ ಸಲ್ಲುವಂತಹದ್ದು’ ಎಂದರು.

ಆರ್ಎಸ್ಎಸ್ ಮುಖಂಡ ವಾಸುದೇವ ಭಟ್ ಕೃತಿಯನ್ನು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.