ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಲಕಾಡು: ಹೈಬ್ರಿಡ್ ಸಣ್ಣ ಭತ್ತಕ್ಕೆ ಭಾರಿ ಬೇಡಿಕೆ, ದಾಖಲೆಯ ಬೆಲೆ

Published 20 ಡಿಸೆಂಬರ್ 2023, 13:28 IST
Last Updated 20 ಡಿಸೆಂಬರ್ 2023, 13:28 IST
ಅಕ್ಷರ ಗಾತ್ರ

ತಲಕಾಡು: ಇಲ್ಲಿನ ಮಾಧವ ಮಂತ್ರಿ, ರಾಮಸ್ವಾಮಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಐದು ಸಾವಿರಕ್ಕೆ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ಭತ್ತದ ಕಟಾವು ಕಳೆದ ಒಂದು ವಾರದಿಂದ ಭರದಿಂದ ಸಾಗಿದೆ.

ಈ ಬಾರಿ ಹೈಬ್ರಿಡ್ ಸಣ್ಣಭತ್ತಕ್ಕೆ ಬಾರಿ ಬೇಡಿಕೆ ಜೊತೆಗೆ ದಾಖಲೆಯ ಬೆಲೆ ಸಿಕ್ಕಿದೆ. ಐಆರ್ 64 ಭತ್ತಕ್ಕೂ ಸಹ ಈ ಬಾರಿ ₹2500 ವರೆಗೆ ಬೆಲೆ ಸಿಕ್ಕಿದೆ. ಜ್ಯೋತಿ ಭತ್ತಕ್ಕೆ ಗರಿಷ್ಠ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ನಿರೀಕ್ಷಿಸಿದಷ್ಟು ಬೆಲೆ ಸಿಗದೆ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ರೋಗಭಾದೆಯಿಂದಾಗಿ ರೋಗ ನಿಯಂತ್ರಣಕ್ಕೆ ನಾಲ್ಕೈದು ಬಾರಿ ಔಷದಿ ಸಿಂಪಡಣೆಗೆ ಸಾಕಷ್ಟು ಹಣ ಖರ್ಚಾಗಿದೆ. ಆದರೆ ಬೆಲೆ ಹೆಚ್ಚಿರುವುದರಿಂದ ರೈತರು ನಿಟ್ಟುಸಿರುಬಿಡುವಂತಾಗಿದೆ.

ಸಣ್ಣ ಭತ್ತಕ್ಕೆ ಕ್ವಿಂಟಾಲಿಗೆ ಕನಿಷ್ಠ ಧಾರಣೆ ₹3 ಸಾವಿರ ಇದ್ದು, ಗರಿಷ್ಠ ₹3500 ತಲುಪಿದೆ. ಸಣ್ಣಭತ್ತಕ್ಕೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ರೈತರು ಸಂಕಟದಿಂದ ಪಾರಾಗಿದ್ದಾರೆ ಎಂದು ರೈತ ರಂಗ ನಾಯಕ, ಕುಕ್ಕುರು ಶಾಂತರಾಜು, ಟೀ ಅಂಗಡಿ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT