ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೇಶ ದೊಡ್ಡಪಾಳ್ಯ ಪುಸ್ತಕಗಳ ಬಿಡುಗಡೆ 19ರಂದು

Last Updated 15 ಫೆಬ್ರವರಿ 2023, 15:36 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾವಾಣಿ’ ಸುದ್ದಿ ಸಂಪಾದಕ ಸುದೇಶ ದೊಡ್ಡಪಾಳ್ಯ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಫೆ.19ರಂದು ಬೆಳಿಗ್ಗೆ 10.30ಕ್ಕೆ ಹುಣಸೂರು ರಸ್ತೆಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯಲಿದೆ.

ವಿಸ್ಮಯ ಬುಕ್‌ಹೌಸ್‌ ಪ್ರಕಟಿಸಿರುವ ‘ಈಶಾನ್ಯ ದಿಕ್ಕಿನಿಂದ’ ಅಂಕಣ ಬರಹ, ‘ಹಂಗರಹಳ್ಳಿಯ ಬರ್ಬರ ಸಂಕೋಲೆಗಳು’ ವಿಭಿನ್ನ ಬರಹಗಳ ಕಟ್ಟು ಹಾಗೂ ‘ಒಲವು ನಮ್ಮ ಬದುಕು’ (ಪ್ರೇಮ ಕಥನಗಳ ಸರಣಿ–3ನೇ ಮುದ್ರಣ) ಪುಸ್ತಕಗಳನ್ನು ಪತ್ರಕರ್ತ ಕೃಷ್ಣಪ್ರಸಾದ್ ಬಿಡುಗಡೆ ಮಾಡಲಿದ್ದಾರೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪುಸ್ತಕಗಳ ಬಗ್ಗೆ ಮಾತನಾಡಲಿದ್ದಾರೆ. ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ–ಸೇನಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಸ್ಮಯ ಬುಕ್‌ಹೌಸ್‌ ಪ್ರಕಾಶ್‌ ಚಿಕ್ಕಪಾಳ್ಯ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT