ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಾಳ‌ ಬಟ್ಟೆ’ಗೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

Published 29 ಮೇ 2024, 15:40 IST
Last Updated 29 ಮೇ 2024, 15:40 IST
ಅಕ್ಷರ ಗಾತ್ರ

ಮೈಸೂರು: ಎಂ.ಉಷಾ ಅವರ ‘ಬಾಳ‌ ಬಟ್ಟೆ’ ಕಾದಂಬರಿ (ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನದಿಂದ ಪ್ರಕಟ)ಯನ್ನು 2024ನೇ ಸಾಲಿನ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇಲ್ಲಿನ ಸಮತಾ ಅಧ್ಯಯನ ಕೇಂದ್ರವು ಸ್ಥಾಪಿಸಿರುವ ಈ ಪ್ರಶಸ್ತಿಗೆ 2020-2023ರ ಅವಧಿಯಲ್ಲಿ ಮಹಿಳೆಯರು ಪ್ರಕಟಿಸಿದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಬಂದಿದ್ದ 24 ಕಾದಂಬರಿಗಳನ್ನು ಅವಲೋಕಿಸಿದ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ, ಡಿ.ವಿಜಯಲಕ್ಷ್ಮಿ, ಎಚ್.ಎಂ.ಕಲಾಶ್ರೀ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಉಷಾ ಅವರ ಮೊದಲ‌ ಕಾದಂಬರಿಯನ್ನು ಪ್ರಶಸ್ತಿಗೆ ಪರಿಗಣಿಸಿದೆ. ಪ್ರಶಸ್ತಿಯು ₹25ಸಾವಿರ ಬಹುಮಾನ ಮತ್ತು ಫಲಕ ಹೊಂದಿದೆ. ಜುಲೈ 21ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು’ ಎಂದು ಅಧ್ಯಕ್ಷೆ ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.

ಕವನ ಲಲಿತ ಪ್ರಬಂಧ ಸ್ಪರ್ಧೆ: ಅಭಿಷೇಕ್‌ ನವ್ಯಾ ಪ್ರಥಮ

ಮೈಸೂರು: ಇಲ್ಲಿನ ‘ಸಮತಾ ಅಧ್ಯಯನ ಕೇಂದ್ರ’ವು ಸಂಸ್ಥಾಪಕ ಅಧ್ಯಕ್ಷೆ ವಿಜಯಾ ದಬ್ಬೆ ನೆನಪಿನಲ್ಲಿ 20ರಿಂದ 35 ವಯಸ್ಸಿನವರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ‘ಕವನ ಲಲಿತ ಪ್ರಬಂಧ ಸ್ಪರ್ಧೆ -2024’ಯ ಫಲಿತಾಂಶ ಪ್ರಕಟಗೊಂಡಿದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ವೈ.ಎಸ್. ಅಭಿಷೇಕ್ (ಕವನ) ಕಾಸರಗೋಡು ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದ ಆರ್.ನವ್ಯಾ (ಲಲಿತ ಪ್ರಬಂಧ) ಪ್ರಥಮ ಬಹುಮಾನ ಪಡೆದಿದ್ದಾರೆ.

ಕವನ ವಿಭಾಗದಲ್ಲಿ ದಾವಣಗೆರೆ ವಿ.ವಿ.ಯ ಕೆ. ರುಜುವಾನ್ ಅಮಿತ ಎಂ.ಕುಡಚೆ ಲಲಿತ ಪ್ರಬಂಧದಲ್ಲಿ ಕೊಡಗಿನ ಕೆ.ಎಚ್.ಮುಸ್ತಾಫ ಮಂಗಳೂರು ವಿ.ವಿ.ಯ ಎನ್. ಸಂಧ್ಯಾ ಕ್ರಮವಾಗಿ ದ್ವಿತೀಯ ತೃತೀಯ ಬಹುಮಾನ ಪಡೆದಿದ್ದಾರೆ.

ತೀರ್ಪುಗಾರರ ಮೆಚ್ಚುಗೆ ಪಡೆದವರು

ಕವನ ವಿಭಾಗ– ಸಂಜನಾ ಯಂಬತ್ನಾಳ್ (ತಾನಾಜಿ ಗಲ್ಲಿ ಬೆಳಗಾವಿ) ರಶ್ಮಿ ಎಸ್.ನಾಯಕ್ (ರಾಜ್ಯಶಾಸ್ತ್ರ ವಿಭಾಗ ಮೈಸೂರು ವಿವಿ) ಪಿ.ರಂಜಿತ (ಕೇರಳ ಕೇಂದ್ರೀಯ ವಿವಿ ಕಾಸರಗೋಡು) ಮಹಮ್ಮದ್ ಷರೀಫ್ ಕಾಡುಮಠ (ಕೊಳ್ನಾಡು ಬಂಟ್ವಾಳ ತಾಲ್ಲೂಕು) ಸಹನ ಕೆ.ಜಿ. (ಹರತಾಳು ಶಿವಮೊಗ್ಗ‌ ಜಿಲ್ಲೆ) ರಂಜಿತ ಪಿ.ಆರ್. (ವಿನಾಯಕ ನಗರ ಮೈಸೂರು) ಸಂದೀಪ ಎಂ.ಪಿ. (ಮ್ಯಾದನಹೊಳೆ ಹಿರಿಯೂರು ತಾಲ್ಲೂಕು) ಶ್ರುತಿ ಎನ್. (ಬೊಮ್ಮೇನಹಳ್ಳಿ ಮೈಸೂರು) ಹೃರ್ಷಿತಾ ಎಸ್. (ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ) ಸಮ್ಯಕ್ತ ಎಚ್. (ನೂಜಿ‌ ಬಾಳಿಲ ದಕ್ಷಿಣ ಕನ್ನಡ).

ಲಲಿತ ಪ್ರಬಂಧ ವಿಭಾಗ: ತೇಜಶ್ರೀ ಎಂ. (ಕೇರಳ ಕೇಂದ್ರೀಯ ವಿವಿ ಕಾಸರಗೋಡು) ಕುಸುಮಬಾಯಿ ಆರ್. (ಜೆಎಸ್ಎಸ್ ಕಾಲೇಜು ಮೈಸೂರು) ಕೆ.ಸ್ವಾತಿ (ಕೇರಳ ಕೇಂದ್ರೀಯ ವಿವಿ) ರಶ್ಮಿ ಉಡುಪ (ಮೊಳಹಳ್ಳಿ ಕುಂದಾಪುರ ತಾ.) ಎಚ್. ನಾಗರತ್ನಾ (ದಾವಣಗೆರೆ).

ಆನಂದ ಗೋಪಾಲ ಲಾವಣ್ಯ ಪ್ರಭಾ ಎಂ.ಎಸ್.ವೇದಾ  (ಕವನ) ಪ್ರೊ.ಡಿ.ವಿಜಯಲಕ್ಷ್ಮಿ ಎಸ್.ಆರ್. ಅಶ್ವಿನಿ ಬಿ.ಸಿ. ಮಂಜುಳಾ (ಲಲಿತ ಪ್ರಬಂಧ ವಿಭಾಗ) ತೀರ್ಪುಗಾರರಾಗಿದ್ದರು.

ಮೊದಲ ಮೂರು ಮತ್ತು ಮೆಚ್ಚುಗೆ ಪಡೆದವರಿಗೆ ಜುಲೈ 20ರಂದು ಮೈಸೂರಿನಲ್ಲಿ ಸಾಹಿತ್ಯ ಕಮ್ಮಟ ಆಯೋಜಿಸಲಾಗಿದ್ದು ಮರುದಿನ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT