ಮೈಸೂರು: ‘ಕಾಂಗ್ರೆಸ್ಗೆ ಮತ ಹಾಕಿದರೆ ತಾಲಿಬಾನ್ ಸರ್ಕಾರ ಬರುತ್ತದೆ ಎಂದು ವಿಧಾನಸಭೆ ಚುನಾವಣೆ ವೇಳೆ ಹೇಳಿದ್ದೆ. ಈಗ ಅದು ನಿಜವಾಗಿದೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ದೂರಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಇತ್ತೀಚಿಗೆ ಕೊಡಗಿನ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಸರಣಿ ಹತ್ಯೆಗಳು ನಡೆಯುತ್ತಿವೆ’ ಎಂದು ದೂರಿದರು.

‘ಸಿದ್ದರಾಮಯ್ಯ ಸರ್ಕಾರ ತೆಗೆಯುವವರೆಗೂ ಇದು ನಿಲ್ಲುವುದಿಲ್ಲ. ಅವರ ಸರ್ಕಾರದಲ್ಲಿ ಸಾಬ್ರಿಗಷ್ಟೆ ಪ್ರಾಮುಖ್ಯತೆ ಸಿಕ್ಕಿದೆ’ ಎಂದು ಆರೋಪಿಸಿದರು.

ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ‘ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವವರು, ಬಾಂಗ್ಲಾದಿಂದ ನುಸುಳಿರುವವರನ್ನು ಗುರುತಿಸುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ವಾರ್ ರೂಂ ಪ್ರಾರಂಭಿಸಲಾಗಿದೆ. 400ಕ್ಕಿಂತ ಹೆಚ್ಚು ಕರೆಗಳು ಬಂದಿವೆ. ಹಲವು ಮಾಹಿತಿಗಳನ್ನು ಜನರು ನೀಡುತ್ತಿದ್ದಾರೆ. ಬೋಗಸ್ ಆಧಾರ್ ಕಾರ್ಡ್ ಸೃಷ್ಟಿಸಿ ವಾಸವಿದ್ದಾರೆ. ಯಾರಾದರೂ ವಲಸಿಗರಿದ್ದರೆ ಕರೆ ಮಾಡಿ (ಮೊ.ಸಂ.90356 75734, 82176 86764) ಮಾಹಿತಿ ಕೊಡಬಹುದು’ ಎಂದರು.

‘ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಆಗಿರುವುದನ್ನು ಖಂಡಸುತ್ತೇವೆ. ಇಡೀ ರಾಜ್ಯದ ಜನತೆ ಸುಹಾಸ್ ಶೆಟ್ಟಿ ಕುಟುಂಬದ ಜೊತೆಗಿದೆ. ಘಟನೆಯ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.