ಮೈಸೂರು: ಇಲ್ಲಿನ ವರ್ತುಲ ರಸ್ತೆಯ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲು ಕೆಎಸ್‌ಆರ್‌ಟಿಸಿ ನಗರ ವಿಭಾಗದಿಂದ ಬಸ್‌ಗಳ ಕಾರ್ಯಾಚರಣೆಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಬನ್ನಿಮಂಟಪದಲ್ಲಿ ಚಾಲನೆ ನೀಡಿದರು.
ಇದರೊಂದಿಗೆ, ಆ ಭಾಗದ ಜನರ ಬಹುದಿನಗಳ ಬೇಡಿಕೆಗೆ ನಿಗಮ ಸ್ಪಂದಿಸಿದಂತಾಗಿದೆ. ರಿಂಗ್ ರಸ್ತೆಯುದ್ದಕ್ಕೂ ಬಸ್‌ಗಳು ಓಡಾಡಲಿವೆ. ನಗರ ಬಸ್ ನಿಲ್ದಾಣದಿಂದ ಒಟ್ಟು 4 ಮಾರ್ಗಗಳಲ್ಲಿ 14 ಬಸ್‌ಗಳನ್ನು (ಅನುಸೂಚಿ) ಕಾರ್ಯಾಚರಣೆಗೆ ಒದಗಿಸಲಾಗಿದೆ.
ಮಾರ್ಗ–1: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ದಟ್ಟಗಳ್ಳಿ–ಬೋಗಾದಿ–ಹಿನಕಲ್–ಕಲಾಮಂದಿರ–ಮೆಟ್ರೋಪೋಲ್ ವೃತ್ತ–ನಗರ ಬಸ್ ನಿಲ್ದಾಣ.
ಮಾರ್ಗ–2: ನಗರ ಬಸ್ ನಿಲ್ದಾಣ–ಮೆಟ್ರೋಪೋಲ್ ವೃತ್ತ–ಕಲಾಮಂದಿರ–ಹಿನಕಲ್– ಭಾರತ್ ಕ್ಯಾನ್ಸರ್ ಆಸ್ಪತ್ರೆ–ಮಣಿಪಾಲ್ ಆಸ್ಪತ್ರೆ–ಎಲ್‌ಐಸಿ ವೃತ್ತ– ಹೈವೇ ವೃತ್ತ– ನಗರ ಬಸ್ ನಿಲ್ದಾಣ.
ಮಾರ್ಗ–3: ನಗರ ಬಸ್ ನಿಲ್ದಾಣ–ಹೈವೇ ವೃತ್ತ– ಎಲ್‌ಐಸಿ ವೃತ್ತ– ಮಣಿಪಾಲ್ ಆಸ್ಪತ್ರೆ–ನಾರಾಯಣ ಹೃದಯಾಲಯ–ಸಾತಗಳ್ಳಿ ಬಸ್ ನಿಲ್ದಾಣ–ದೇವೇಗೌಡ ವೃತ್ತ–ನಜರ್‌ಬಾದ್– ನಗರ ಬಸ್ ನಿಲ್ದಾಣ.
ಮಾರ್ಗ–4: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ನಂಜನಗೂಡು ರಸ್ತೆ ಜಂಕ್ಷನ್–ಉತ್ತನಹಳ್ಳಿ– ತಿ.ನರಸೀಪುರ ರಸ್ತೆಯ ಜಂಕ್ಷನ್– ದೇವೇಗೌಡ ವೃತ್ತ–ನಜರ್‌ಬಾದ್– ನಗರ ಬಸ್ ನಿಲ್ದಾಣ.