ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿರಿಯಾಪಟ್ಟಣ: ಬಸ್‌ ಚಾಲಕರಿಗೆ ಕಾನೂನು ಅರಿವು

Published : 2 ಆಗಸ್ಟ್ 2024, 14:00 IST
Last Updated : 2 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಪಿರಿಯಾಪಟ್ಟಣ: ‘ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ತಾವು ಚಲಾಯಿಸುವ ಬಸ್ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದುಕೊಂಡಲ್ಲಿ ಅಪಘಾತರಹಿತವಾಗಿ ಚಲಾಯಿಸಲು ಸಾಧ್ಯ’ ಎಂದು ನ್ಯಾಯಾಧೀಶ ರಾಜು ತಿಳಿಸಿದರು.

ತಾಲ್ಲೂಕಿನ ಕಗ್ಗುಂಡಿ ಗೇಟ್ ಬಳಿಯ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಮತ್ತು ವಕೀಲರ ಸಂಘ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ಕಚೇರಿಗಳಲ್ಲಿ ಕುಳಿತು ಆರಾಮವಾಗಿ ಕೆಲಸ ಮಾಡುವಂತೆ ವಾಹನ ಚಲಾಯಿಸಲು ಸಾಧ್ಯವಿಲ್ಲ, ಇದು ವಿಭಿನ್ನ ಕೆಲಸವಾಗಿದ್ದು, ಕರ್ತವ್ಯದ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಇದ್ದರೆ ಮಾತ್ರ ಸುರಕ್ಷಿತವಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಸಾಧ್ಯ’ ಎಂದರು.

‘ಕೆಲವು ಬಸ್‌ಗಳಿಗೆ ವಿಮಾ ಪಾಲಿಸಿಯ ಸೌಲಭ್ಯವಿರುವುದಿಲ್ಲ. ಅಂಥ ಬಸ್‌ಗಳು ಅಪಘಾತವಾದರೆ ನಿಗಮಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ನಿಗಮ ಲಾಭದಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದರು.

ರೋಟರಿ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಜೆ.ಎಸ್.ನಾಗರಾಜ್ ಮಾತನಾಡಿ, ‘ಬೈಕ್ ಸವಾರರು ಸೇರಿದಂತೆ ಕೆಲವು ವಾಹನ ಚಾಲಕರು ತುಂಬಾ ನಿರ್ಲಕ್ಷ್ಯದಿಂದ ಮತ್ತು ಬೇಜಾವಾಬ್ದಾರಿಯಿಂದ ವಾಹನ ಚಲಾಯಿಸಿ ಕೆಎಸ್ಆರ್‌ಟಿಸಿ ಚಾಲಕರಿಗೆ ತೊಂದರೆ ನೀಡುತ್ತಾರೆ. ಆದರೆ, ತಾಳ್ಮೆಯಿಂದ ವರ್ತಿಸುವ ಮೂಲಕ ಸಂಸ್ಥೆ ಹಿತ ಕಾಪಾಡುವಲ್ಲಿ ನೌಕರರ ಪಾತ್ರ ದೊಡ್ಡದಿದೆ’ ಎಂದರು.

ಕೆಎಸ್ಆರ್‌ಟಿಸಿ ಡಿಪೋ ವ್ಯವಸ್ಥಾಪಕ ದರ್ಶನ್ ರಾಮಚಂದ್, ವಕೀಲರ ಸಂಘದ ಕಾರ್ಯದರ್ಶಿ ಶಂಕರ್ ಮಾತನಾಡಿದರು.

ಸಂಸ್ಥೆ ಅಧಿಕಾರಿ ಜ್ಞಾನೇಶ್ವರ್, ರೋಟರಿ ಐಕಾನ್ಸ್ ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ಖಜಾಂಚಿ ಬಿ.ಆರ್.ಗಣೇಶ್, ಸದಸ್ಯರಾದ ಸಿ.ಎನ್.ವಿಜಯ್, ಸತೀಶ್ ಆರಾಧ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT