ಬೆಟ್ಟದಪುರ :ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದರಿಂದ, ಜವಾಬ್ದಾರಿಯುತ ಮತ್ತು ಕಾನೂನು ಪಾಲಿಸುವ ನಾಗರಿಕರಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ನಿವೃತ್ತ ಪಿಎಸ್ಐ ಡಿ.ಆರ್ ಜಯಸ್ವಾಮಿ ಆರಾಧ್ಯ ತಿಳಿಸಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮಕ್ಕಳ ಕಳ್ಳ ಸಾಗಾಣಿಕೆ ಜಾಲ, ಹೆಣ್ಣು ಮತ್ತು ಗಂಡು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಹಾಗೂ ಸೈಬರ್ ಕ್ರೈಂ, ಮೊಬೈಲ್ ಬಳಕೆ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ಅನುಸರಿಸಬೇಕಾದ ಕಾನೂನು ವಿಷಯಗಳನ್ನು ತಿಳಿಸಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವೈಯುಕ್ತಿಕವಾಗಿ ನಗದು ಬಹುಮಾನ ನೀಡಿ, ಅವರಿಗೆ ಪ್ರೋತ್ಸಾಹ ನೀಡಿದರು, ಉನ್ನತ ವ್ಯಾಸಂಗಕ್ಕೆ ತೆರಳಿರುವ ವಿದ್ಯಾರ್ಥಿನಿ ಅನುಷ್ಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಂಶುಪಾಲ ಭರತ್ ರಾಜೇ ಅರಸ್ , ಲೈಂಗಿಕ ದೌರ್ಜನ್ಯ ಸಮಿತಿಯ ಸಂಚಾಲಕರಾದ ಪ್ರಾಧ್ಯಾಪಕಿ ಪದ್ಮಾವತಿ, ಸಂಚಾಲಕ ಶಾಕಿರ್, ನಾಗರಾಜೇಗೌಡ, ಸಿಬ್ಬಂದಿ ಪ್ರಶಾಂತ್, ಬೋಧಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.