ಪಿರಿಯಾಪಟ್ಟಣ: ‘ಏ.26ರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ‘ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ತಾಲ್ಲೂಕಿಗೆ ಆಗಮಿಸುತ್ತಿದ್ದು, ಪ್ರತಿ ಇಲಾಖೆಗಳು ಪರಸ್ಪರ ತಮ್ಮ ಜವಾಬ್ದಾರಿ ಅರಿತು ಪ್ರತಿಯೊಬ್ಬರೂ ಕೂಡ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ,‘ಇಲಾಖೆವಾರು ಹಂಚಿಕೆಯಾಗಿರುವ ಜವಾಬ್ದಾರಿ ಪುನರ್ ಪರಿಶೀಲನೆ ಮಾಡಿ ಅಂದಿನ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ರೂಪಿಸಬೇಕು. ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಸಂಬಂಧ ತಮ್ಮ ಇಲಾಖೆಯ ಸವಲತ್ತುಗಳು ಮತ್ತು ಸಹಾಯಧನಡಿಯಲ್ಲಿ ನೀಡಲಾಗುವ ಸೌಲಭ್ಯ ಪ್ರದರ್ಶನ ಮಾಡಬೇಕು. ಈ ಮೂಲಕ ಜನರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ರಸ್ತೆ ಮೂಲಕ ಬರಲಿರುವ ಸಿಎಂ ಹೆಲಿಪ್ಯಾಡ್ ಮೂಲಕ ಹಿಂತಿರುಗಲಿದ್ದು ಆನೇಚೌಕೂರು ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು’ ತಿಳಿಸಿದರು.

‘ವೇದಿಕೆಯಲ್ಲಿ ಸೀಮಿತ ಜನರಿಗೆ ಅವಕಾಶ ಮಾತ್ರ ಕಲ್ಪಿಸಬೇಕು. ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏ.26ರಂದು ಪಿರಿಯಾಪಟ್ಟಣದಲ್ಲಿಯೇ ಸಿ.ಎಂ.ಮತ್ತು ಸಚಿವರು ಚಾಲನೆ ನೀಡುತ್ತಿದ್ದು. ಇದಕ್ಕೆ ಪೂರಕವಾಗಿ ಇಲಾಖೆಯವರು ಜಾನುವಾರು ರಾಸುಗಳನ್ನು ಕರೆತಂದು ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಗ್ರಾಮಾಂತರ ಎಸ್ ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಣಾಧಿಕಾರಿ ಮುಖೇಶ್ ಕುಮಾರ್, ಹುಣಸೂರು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ಸಿಪಿಒ ಪ್ರಭುಸ್ವಾಮಿ, ತಹಶೀಲ್ದಾರ್ ನಿಸರ್ಗ ಪ್ರಿಯಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ತಾಲ್ಲೂಕು ಅಧಿಕಾರಿಗಳಾದ ಚಂದ್ರಶೇಖರ, ಪ್ರಸಾದ್,ರವಿ ಪ್ರಸನ್ನ, ಪೊಲೀಸ್ ವೃತ್ತ ನಿರೀಕ್ಷಕ ಗೋವಿಂದರಾಜ್, ಅಭಿಯಂತರರಾದ ವೆಂಕಟೇಶ್, ಕುಮಾರ್, ಕೃಷ್ಣ ಮೂರ್ತಿ,ರಕ್ಷಿತ್, ದಿನೇಶ್, ಮಲ್ಲಿಕಾರ್ಜುನ,ಪದ್ಮ ಶ್ರೀ, ಸೋಮಯ್ಯ, ಕೃಷ್ಣ ಗೌಡ, ಹಿತೇಂದ್ರ, ಸಣ್ಣಸ್ವಾಮಿ, ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪಿರಿಯಾಪಟ್ಟಣದ ತಾ. ಪಂ. ಸಭಾಂಗಣದಲ್ಲಿ ನಡೆದ ಮುಖ್ಯ ಮಂತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಎಸ್ ಪಿ ವಿಷ್ಣುವರ್ಧನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.