ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುತ್ತೂರು ಸಾಮೂಹಿಕ ವಿವಾಹ: ಸ‍ಪ್ತಪದಿ ತುಳಿದ 10 ಅಂತರ್ಜಾತಿ ಜೋಡಿ

Published 7 ಫೆಬ್ರುವರಿ 2024, 8:17 IST
Last Updated 7 ಫೆಬ್ರುವರಿ 2024, 8:17 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಬುಧವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 10 ಅಂತರ್ಜಾತಿ, ಒಂದು ಮರು ಮದುವೆ ಸೇರಿ 118 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಹರಗುರು ಚರಮೂರ್ತಿಗಳು, ಪೋಷಕರು, ಬಂಧುಗಳು, ಮಿತ್ರರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಸತಿ–ಪತಿಗಳಾದರು.

4 ವೀರಶೈವ ಲಿಂಗಾಯತ, 61 ಪರಿಶಿಷ್ಟ ಜಾತಿ, 26 ಪರಿಶಿಷ್ಟ ಪಂಗಡ, 18 ಹಿಂದುಳಿದ ವರ್ಗ, 10 ಅಂತರ್ಜಾತಿ, 4 ಅಂಗವಿಕಲ‌, 23 ತಮಿಳುನಾಡಿನ ಜೋಡಿಗಳು ಬೆಳಿಗ್ಗೆ‌ 11.52ಕ್ಕೆ ವಿವಾಹವಾದರು. ಪ್ರಭುದೇವ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಂತಗಿರಿ ಆಶ್ರಮದ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಉದ್ಯಮಿ ಮೂಲಚಂದ್ ನಹರ್, ಶಾಸಕ ಸಿ.ಕೆ. ರಾಮಮೂರ್ತಿ, ಯುಎಸ್‌ಎ ಮೇರಿಲ್ಯಾಂಡ್ ನ ವಿ. ವೀರಪ್ಪನ್‌, ಅಮೆರಿಕದ ವಾಷಿಂಗ್ಟನ್‌ನ ಶಿವಾನಂದ್ ಉಪಸ್ಥಿತರಿದ್ದರು.

2000 ರಿಂದ 2024ರ ವರೆಗೆ ನಡೆದ ಸಾಮೂಹಿಕ ವಿವಾಹದಲ್ಲಿ 3,076 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 457 ಜೋಡಿಗಳು ಕೈ ಹಿಡಿದಿದ್ದಾರೆ. ಇದುವರೆಗೆ ಸುತ್ತೂರಿನಲ್ಲಿ ಒಟ್ಟು 3, 533 ಜೋಡಿಗಳು ವಿವಾಹವಾಗಿದ್ದಾರೆ.

ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದ 118 ಜೋಡಿ

ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದ 118 ಜೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT