ಸರಗೂರು: ತಾಲ್ಲೂಕಿನ ಚನ್ನಗುಂಡಿ ಕಾಲೊನಿ ಆಶ್ರಮ ಶಾಲೆಯನ್ನು ತಮ್ಮೆಲ್ಲರ ಆಶಯದಂತೆ ಹಂತಹಂತವಾಗಿ ಪದವಿ ಪೂರ್ಣ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ತಾಲ್ಲೂಕಿನ ಎಂ.ಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಗುಂಡಿ ಕಾಲೊನಿಯ ವಾಲ್ಮೀಕಿ ಮಹರ್ಷಿ ಗಿರಿಜನ ಆಶ್ರಮ ಶಾಲೆಯಲ್ಲಿ ಮಂಗಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಭೆನಡೆಸಿ ಹಾಡಿಯ ಮತ್ತು ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಮಾತನಾಡಿದರು.

ಶಾಲೆಯ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುವುದು. ಆದಿವಾಸಿ ಜನಾಂಗದ ವಸತಿ ರಹಿತರಿಗೆ ವಿಶೇಷ ಘಟಕ ಯೋಜನೆಯಡಿ ವಸತಿ ಮಂಜೂರು ಮಾಡಲು ಕ್ರಮ ವಹಿಸಲಾಗುತ್ತದೆ. ಆದಿವಾಸಿಗಳಿಗೆ ಆರು ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ಗಳನ್ನು ವರ್ಷ ಪೂರ್ತಿ ನೀಡುವಂತೆ ಮುಖ್ಯ ಮಂತ್ರಿಗಳ ಗಮನ ಸೆಳೆದು ರಾಜ್ಯಾದಾದ್ಯಂತ ಆದಿವಾಸಿಗಳಿಗೆ ವಿತರಿಸಲಾಗುತ್ತಿದೆ. ಇದರ ಸದ್ಬಳಕೆಯನ್ನು ಮಾಡಿಕೊಂಡು ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದರು ಎಂದರು.

ಚನ್ನಗುಂಡಿ ಕಾಲೊನಿ, ಅಳಲಹಳ್ಳಿ ಕಾಲೊನಿ, ಯಶವಂತಪುರ, ಎತ್ತಿಗೆ ಗ್ರಾಮಗಳ ಸಿ.ಸಿ ರಸ್ತೆ ಹಾಗೂ ಅಂಗನವಾಡಿ ಕೇಂದ್ರದ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಸಾರಿಗೆ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಹುಲಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಈ ವಿಚಾರವಾಗಿ ಸುದೀರ್ಘವಾಗಿ ಮಾತನಾಡಿ, ಅರಣ್ಯದ ಅಂಚಿನಲ್ಲಿ ಇಪಿಟಿ, ರೈಲ್ವೆ ಬ್ಯಾರಿಕೇಡ್, ಜಾಲರಿ ಅಳವಡಿಸುವಂತೆ ಮನವಿ ಮಾಡಿದ್ದೇನೆ. ಕಾಡಿನಿಂದ ಪ್ರಾಣಿಗಳು ಹೊರ ಬರಲು ಹಾಗೂ ಅವುಗಳನ್ನು ತಡೆಗಟ್ಟಲು ವೈಜ್ಞಾನಿಕ ಕಾರಣ ಮತ್ತು ಪರಿಹಾರವನ್ನು ತಿಳಿಸುವಂತೆ ಮೇಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ, ಇದೆಲ್ಲವೂ ಹತೋಟಿಗೆ ಬಂದ ನಂತರ ಸರ್ಕಾರದ ನಿರ್ದೇಶನದಂತೆ ಸಫಾರಿ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಜಾಗೃತರಾಗಬೇಕು, ಕಾಡು ಪ್ರಾಣಿಗಳು ಹೊರಬಂದಾಗ ಹತ್ತಿರ ಹೋಗದೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು, ಕಾರ್ಯಾಚರಣೆ ವೇಳೆ ಹತ್ತಿರ ಹೋಗದೆ ಇಲಾಖಾಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಪರಿಶಿಷ್ಟ ಪಂಗಡ ಸಹಾಯಕ ನಿರ್ದೇಶಕ ಮಹೇಶ್, ಮೆನೇಜರ್ ನಾಗರಾಜು, ಎಂ.ಸಿ.ತಳಲು ಗ್ರಾಮ ಪಂಚಾಯತಿ ಸದಸ್ಯ ಚಿಕ್ಕಕ್ಯಾತ, ಪ್ರಕಾಶ್, ಶಿವಲಿಂಗಯ್ಯ, ಹಾದನೂರು ಪ್ರಕಾಶ್, ಮುಖಂಡರಾದ ಅಣ್ಣಯ್ಯಸ್ವಾಮಿ, ಮನುಗನಹಳ್ಳಿ ಗುರುಸ್ವಾಮಿ, ಬೀರ್ವಾಳು ಚಿಕ್ಕಣ್ಣ, ನಾಗೇಂದ್ರ, ಪುಟ್ಟಸ್ವಾಮಿ, ಶಿವಮೂರ್ತಿ, ಶಶಿಪಾಟೀಲ್. ಸಿದ್ದರಾಮು, ಅಶ್ರಫಲಿ, ಜಯಕುಮಾರ್, ಅಶೋಕ್. ರೇವಣ್ಣ, ಬಿ.ಸೋಮಣ್ಣ, ನಂದೀಶ್, ಸೋಮ. ಕೃಷ್ಣ. ಮಾಣ್ಬಾ. ಪದ್ಮಾ. ಗೀತಾ. ರಾಧಾ, ಶಿವಮ್ಮ, ಲಕ್ಷ್ಮಿಬಾಯಿ, ಸರಸ್ವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.