ಮೈಸೂರು: ‘ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಆಷಾಢ ಶುಕ್ರವಾರದಂದು ದರ್ಶನ ಮಾಡಲು ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿಕೊಡಬೇಕು. ಯಾವುದೇ ಲೋಪ-ದೋಷಗಳು ಉಂಟಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಆಷಾಢ ಶುಕ್ರವಾರದ ಕಾರಣದಿಂದ ಚಾಮುಂಡಿ ಬೆಟ್ಟದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮೊದಲ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಬಂದಿದ್ದ ಭಕ್ತರಿಗೆ ಸಾಕಷ್ಟು ಅನನುಕೂಲ ಆಗಿರುವ ಬಗ್ಗೆ ನಮ್ಮ ಕಚೇರಿಗೆ ದೂರುಗಳು ಬಂದಿವೆ. ಈ ಕಾರಣದಿಂದ ಬೆಟ್ಟಕ್ಕೆ ಆಗಮಿಸಿ, ಇಲ್ಲಿ ನಡೆದಿರುವ ಸಿದ್ಧತೆ ಹಾಗೂ ಭಕ್ತರಿಗೆ ಮಾಡಲಾಗಿರುವ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಕೆಲವೊಂದು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ’ ಎಂದರು.

‘ಪ್ರಮುಖವಾಗಿ ವಿಶೇಷ ದರ್ಶನಕ್ಕೆ ₹ 2ಸಾವಿರ ನಿಗದಿಪಡಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಟಿಕೆಟ್ ದರವನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಅರಿಸಿನ–ಕುಂಕುಮ:

‘ಬೆಟ್ಟದ ಮೇಲೆ ರಾಸಾಯನಿಕಯುಕ್ತ ಅರಿಸಿನ-ಕುಂಕುಮ ಮಾರಾಟ ಮಾಡುತ್ತಿರುವ ಬಗ್ಗೆಯೂ ಗಮನಹರಿಸಲಾಗಿದೆ. ಪ್ಲಾಸ್ಟಿಕ್ ಮುಕ್ತಗೊಳಿಸಿದಂತೆ ಬೆಟ್ಟದ ಮೇಲಿರುವ ಎಲ್ಲ ಅಂಗಡಿಗಳು ರಾಸಾಯನಿಕೇತರ ಹಾಗೂ ಸಾವಯವ ಅರಿಸಿನ–ಕುಂಕುಮವನ್ನು ಕಡ್ಡಾಯವಾಗಿ ಮಾರುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಆಷಾಢ ಶುಕ್ರವಾರದಂದು ಬಾದಾಮಿ ಹಾಲು ಡ್ರೈ ಫ್ರೂಟ್ಸ್ ಒಂದಷ್ಟು ಜನರಿಗೆ ಸಿಕ್ಕಿದೆ. ಸಾಕಷ್ಟು ಜನರಿಗೆ ಸಿಕ್ಕಿಲ್ಲ. ಈ ಗೊಂದಲ ಸರಿಪಡಿಸುವ ಬಗ್ಗೆ ಪ್ರಾಧಿಕಾರ ತಿಳಿಸಿದೆ.
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ

‘ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿಗಿನ ಹುಲಿಗಳ ಸಾವು ಹಾಗೂ ಕೋತಿಗಳ ಮಾರಣ ಹೋಮ ಘಟನೆಗಳು ಖಂಡನೀಯ. ಹುಲಿಗಳ ಸಂರಕ್ಷಣೆ ಆಗಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು ಹಾಗೂ ನಮ್ಮ ವನ ಸಂಪತ್ತು ಹೆಚ್ಚಿಸಬೇಕಾದ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂಸದರು ಒತ್ತಾಯಿಸಿದರು.

ಇದಕ್ಕೂ ಮುನ್ನ ಅವರು, ಬೆಟ್ಟದಲ್ಲಿ ಭಕ್ತರು ದರ್ಶನ ಮಾಡಲು ಕಲ್ಪಿಸಿರುವ ವ್ಯವಸ್ಥೆಯ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಂದ ಮಾಹಿತಿ ಪಡೆದುಕೊಂಡರು.

‘ವಸ್ತ್ರಸಂಹಿತೆಗೆ ಬೆಂಬಲ’

‘ಚಾಮುಂಡಿಬೆಟ್ಟದಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತರಬೇಕಾಗಿದೆ. ಇದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ’ ಎಂದು ಯದುವೀರ್ ಹೇಳಿದರು.

‘ನಮ್ಮ ಸಂಸ್ಕೃತಿ ಸಂಪ್ರದಾಯ ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ದೇಗುಲಕ್ಕೆ ಬರಬೇಕಾದಾಗ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಇದನ್ನು ಪಾಲಿಸಬೇಕು ಎಂಬುದು ನಮ್ಮಲ್ಲಿಯೇ ಬರಬೇಕು. ಧಾರ್ಮಿಕ ಸ್ಥಳಕ್ಕೆ ಹೇಗೆ ಬರಬೇಕೋ ಅದೇ ರೀತಿಯಲ್ಲೇ ಜನರು ಬರಬೇಕು. ಇದು ಧಾರ್ಮಿಕತೆ ರಕ್ಷಣೆಗೂ ಸಹಕಾರಿಯಾಗಲಿದೆ’ ಎಂದು ಪ್ರತಿಪಾದಿಸಿದರು.

‘ಬೆಟ್ಟದ ಮೇಲಿರುವ ಜಾಗದ ಮಿತಿಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅನ್ನದಾಸೋಹ ಪಾರ್ಕಿಂಗ್ ವಿಚಾರದಲ್ಲಿ ಜನರು ಕೂಡ ಅರ್ಥ ಮಾಡಿಕೊಳ್ಳಬೇಕು. ಅನ್ನ ದಾಸೋಹ ಮಾಡಬೇಕು ಎನಿಸುವವರು ಆಡಳಿತಾಧಿಕಾರಿ ಅನುಮತಿ ಪಡೆದು ಸೂಕ್ತ ಹಾಗೂ ನಿಗದಿತ ಸ್ಥಳದಲ್ಲಿ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯಮಂತ್ರಿ ನಡವಳಿಕೆಯೇ ಕಾರಣ’

‘ಧಾರವಾಡದ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಯೇ ಕಾರಣ. ಅವರ ಮೇಲೆ ಮುಖ್ಯಮಂತ್ರಿ ವೇದಿಕೆಯಲ್ಲೇ ಗದರಿದ್ದರು. ಅಧಿಕಾರಿಗಳು ತಪ್ಪು ಮಾಡಿದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಬೇಕು. ಅದನ್ನ ಬಿಟ್ಟು ಬಹಿರಂಗವಾಗಿ ಅವಮಾನಿಸುವುದು ಸರಿಯಲ್ಲ’ ಎಂದು ಯದುವೀರ್ ಪ್ರತಿಕ್ರಿಯಿಸಿದರು.

‘ಅಧಿಕಾರಿಗಳು–ಜನಪ್ರತಿನಿಧಿಗಳು ಪರಸ್ಪರ ಗೌರವ ಕೊಟ್ಟು ಕೆಲಸ ಮಾಡಬೇಕು’ ಎಂದರು.

‘ದೇಗುಲದಲ್ಲಿ ಮೊಬೈಲ್ ಫೋನ್ ಬ್ಯಾನ್ ಚಿಂತನೆ’

‘ತಿರುಪತಿ ಮಾದರಿಯಲ್ಲಿ ನಮ್ಮ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್ ಫೋನ್ ಹಾಗೂ ಇತರ ವಿದ್ಯುನ್ಮಾನ ಸಾಧನಗಳನ್ನು ನಿಷೇಧಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ’ ಎಂದು ಯದುವೀರ್ ತಿಳಿಸಿದರು.

‘ದೇವಿಯ ಫೋಟೊ ಯಾರು ಮೊಬೈಲ್ ಫೋನ್ನಲ್ಲಿ ತೆಗೆಯಬಾರದು. ಕೆಲವರಿಗೆ ಚಾಮುಂಡಿ ತಾಯಿಯ ಫೋಟೊ ಮೊಬೈಲ್ ಫೋನ್ನಲ್ಲಿ ಇಟ್ಟುಕೊಳ್ಳಬೇಕೆಂಬ ಆಸೆ ಇರುತ್ತದೆ. ಅಂಥವರಿಗೆ ಫೋಟೊಗಳು ಬೇರೆ ವಿಧಾನದಲ್ಲಿ ದೊರೆಯುವಂತೆ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.