ಪಿರಿಯಾಪಟ್ಟಣ: ತಂಬಾಕು ಖರೀದಿದಾರ ಕಂಪನಿಗಳು ತಂಬಾಕಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗಲಿಲ್ಲವೆಂದರೆ ಮಂಡಳಿಯೇ ಖರೀದಿಸಲಿ ಮತ್ತು ಸೂಕ್ತ ಬೆಲೆ ನೀಡಲಿ, ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಎಂದು ರೈತರು ಅಗ್ರಹಿಸಿದರು.

ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ವಿವಿಧ ರೈತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಕುಂದು–ಕೊರತೆ ಸಭೆಯಲ್ಲಿ ರೈತರು ಅಭಿಪ್ರಾಯ ತಿಳಿಸಿದರು. ರೈತರನ್ನು ಹೊರಗಿಟ್ಟು ಬೆಲೆ ನಿಗದಿ ಮಾಡುವುದು ನಿಲ್ಲಬೇಕು, ಕನ್ನಡ ಭಾಷೆ ಬರುವವರಿಗೆ ರಾಜ್ಯದಲ್ಲಿ ತಂಬಾಕು ಮಂಡಳಿ ಅಧಿಕಾರಿಗಳಾಗಿ ನೇಮಕ ಮಾಡಬೇಕು, ತಂಬಾಕು ರೈತರ ಮರಣ ನಿಧಿ ₹ 5 ಲಕ್ಷ ನೀಡಬೇಕು, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು, ಕಾರ್ಡ್ ದಾರರಿಗೆ ಪರವಾನಿಗೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುತ್ತಿದ್ದಾರೆ, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದರು. ಅನ್ಯಾಯಕ್ಕೆ ಒಳಗಾಗುತ್ತಿರುವ ಬೆಳೆಗಾರರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂಸದ ಯದುವೀರ್ ಮಾತನಾಡಿ, ತಂಬಾಕು ಬೆಳೆಗಾರರ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತಂದು ಅನ್ಯಾಯಕ್ಕೊಳ್ಳಗಾಗಿರುವ ರೈತರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತೇನೆ, ಸ್ಥಳೀಯವಾಗಿ ಹರಾಜು ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ ವಹಿಸುತ್ತೇನೆ, ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸಲು ಕ್ರಮ ಕೈಗೊಂಡು, ಹರಾಜು ಪ್ರಕ್ರಿಯೆ ರೈತರಿಗೆ ಸ್ಕ್ರೀನ್ ಮೂಲಕ ನೋಡಲು ಅವಕಾಶ ಮಾಡಿಕೊಡಲಾಗುವುದು. ರೈತರು ಎರಡನೇ ಬೆಳೆ ಬೆಳೆಯಲು ಅಧಿಕಾರಿಗಳು ಶಿಫಾರಸು ಮೇರೆಗೆ, ಜುಲೈ ತಿಂಗಳ ನಂತರ ತೀರ್ಮಾನ ತಿಳಿಸುತ್ತೇವೆ ಎಂದರು.

ಮಾಜಿ ಶಾಸಕ ಎಚ್.ಸಿ.ಬಸವರಾಜ್, ತಂಬಾಕು ಮಂಡಳಿ ನಿರ್ದೇಶಕ ನಿರ್ದೇಶಕ ಶ್ರೀನಿವಾಸ್, ಆರ್.ಎಂ.ಗಳಾದ ಮಾರಣ್ಣ, ಗೋಪಾಲ, ಜಿ.ಸಿ.ವಿಕ್ರಂ ರಾಜ್ , ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ಅಧ್ಯಕ್ಷ ಸ್ವಾಮಿಗೌಡ, ಯುವ ಘಟಕದ ಅಧ್ಯಕ್ಷ ಮಹದೇವ್, ಬಿಜೆಪಿ ಮಾಜಿ ಅಧ್ಯಕ್ಷರಾದ ಎಂ.ಎಂ.ರಾಜೇಗೌಡ, ಆರ್.ಟಿ.ಸತೀಶ್, ರೈತ ಮುಖಂಡರಾದ ಕಾಮರಾಜ್, ಪ್ರಕಾಶ್ ರಾಜೇ ಅರಸ್, ದಶರಥ, ಸುರೇಶ, ರಫೀಕ್, ವಿಜಯ, ದೇವರಾಜ್, ಮುಖಂಡ ಆರ್.ತುಂಗಾ ಶ್ರೀನಿವಾಸ್, ಚೆಲುವಯ್ಯ,ಮಂಜುನಾಥ್ ಗೌಡ, ದೇವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.