ಹುಣಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಡೆಯುವ ಗಜಪಯಣಕ್ಕೆ ವೀರನಹೊಸಹಳ್ಳಿ ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡಿದ್ದು, ಆ.4ರಂದು ಮಧ್ಯಾಹ್ನ 12.34ರಿಂದ 12.50ರ ಶುಭ ಮುಹೂರ್ತದಲ್ಲಿ ಗಣ್ಯರು ಗಜಪೂಜೆ ನೆರವೇರಿಸಿ ನಾಡ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ನಾಗರಹೊಳೆ ವೀರನಹೊಸಹಳ್ಳಿ ಗೇಟ್ ಬಳಿ ಮೊದಲ ಹಂತದಲ್ಲಿ ಮೈಸೂರಿಗೆ ತೆರಳುವ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಗಣ್ಯರು ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡುವರು. ನಂತರದಲ್ಲಿ ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ವೀರನಹೊಸಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಗಜಪಯಣಕ್ಕೆ ಅಂದಾಜು 4ಸಾವಿರದಿಂದ 5 ಸಾವಿರ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ವೀರನಹೊಸಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಜರ್ಮನ್ ಟೆಂಟ್ನಲ್ಲಿ ಆಸನದ ವ್ಯವಸ್ಥೆ ಹಾಗೂ ಮೈಸೂರಿನ ಬಾಣಸಿಗರಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೈಸೂರು ವಿಭಾಗದ ಡಿಸಿಎಫ್ ಡಾ.ಪ್ರಭುಗೌಡ ತಿಳಿಸಿದರು.

ವೀರನಹೊಸಹಳ್ಳಿ ಸಂಪೂರ್ಣ ತಳಿರು ತೋರಣ, ಆಕರ್ಷಣೀಯ ಸ್ವಾಗತ ಕಮಾನು ಮತ್ತು ರಸ್ತೆ ಅಂಚಿನಲ್ಲಿ ಗಮನ ಸೆಳೆಯುವ ಧ್ವಜಗಳು ರಾರಾಜಿಸುತ್ತಿದೆ. ಬೃಹತ್ ವೇದಿಕೆಯಲ್ಲಿ ಸ್ಥಳಿಯ ಆದಿವಾಸಿ ಗಿರಿಜನ ಆಶ್ರಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಟಿಬೆಟ್ ಕ್ಯಾಂಪ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳಿಂದ ಟಿಬೆಟ್ ನೃತ್ಯ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.