ಮೈಸೂರು: ನಗರ ಪೊಲೀಸ್ ವಿಭಾಗಕ್ಕೆ ಸಂಬಂಧಿಸಿದಂತೆ ನೂತನ ವೆಬ್‌ಸೈಟ್ ಕಾರ್ಯಾರಂಭ ಮಾಡಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವೆಬ್‌ಸೈಟ್ ಲಭ್ಯವಿದೆ.

ನಗರದಲ್ಲಿರುವ ಎಲ್ಲ 26 ಸಿವಿಲ್ ಪೊಲೀಸ್ ಠಾಣೆಗಳು ಮತ್ತು ಇನ್‌ಸ್ಪೆಕ್ಟರ್‌ಗಳ ದೂರವಾಣಿ ಸಂಖ್ಯೆಗಳು, ದೂರು ನೀಡುವುದಕ್ಕೆ ಪ್ರತ್ಯೇಕ ವಿಭಾಗ ಸೇರಿದಂತೆ ಹಲವು ವಿಭಾಗಗಳು ಜನಸ್ನೇಹಿ ಎನಿಸಿವೆ.

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡದ ವಿವರಗಳು, ತುರ್ತು ಸಂಖ್ಯೆಗಳು, ಆಸ್ಪತ್ರೆಗಳು, ಅಗ್ನಿಶಾಮಕ ಠಾಣೆಗಳು, ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಹಲವು ಅಗತ್ಯ ಸಂಪರ್ಕ ಸಂಖ್ಯೆಗಳ ಮಾಹಿತಿ ಹೊಂದಿರುವ ಕಣಜ ಎನಿಸಿದೆ.

ಆದರೆ, ಇನ್ನೂ ದೈನಂದಿನ ಅಪರಾಧ ಪ್ರಕರಣಗಳ ಮಾಹಿತಿ, ಕಮಿಷನರ್ ಅವರ ಸಂದೇಶ ಸೇರಿದಂತೆ ಕೆಲವು ವಿಭಾಗಗಳು ಖಾಲಿ ಇವೆ. ಕೆಲವೊಂದು ಕನ್ನಡದ ವ್ಯಾಕರಣ ದೋಷಗಳು ಉಳಿದುಕೊಂಡಿವೆ.

ವೆಬ್‌ಸೈಟ್ ವಿಳಾಸ: www.mysurucitypolice.karnataka.gov.in.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.