ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು |ಸಾಲ ಪಾವತಿ ಮಾಡಿದ್ದರೂ ರೈತನ ಮನೆ ಹರಾಜಿಗೆ ಆಕ್ರೋಶ

ವಿಜಯನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕಚೇರಿ ಎದುರು ಪ್ರತಿಭಟನೆ
Published 16 ಜನವರಿ 2024, 14:39 IST
Last Updated 16 ಜನವರಿ 2024, 14:39 IST
ಅಕ್ಷರ ಗಾತ್ರ

ಮೈಸೂರು: ಸಾಲ ಪಾವತಿ ಮಾಡಿದ್ದರೂ ಬ್ಯಾಂಕ್‌ ಅಧಿಕಾರಿಗಳು ರೈತನ ಮನೆಯನ್ನು ಹರಾಜು ಹಾಕಿದ್ದಾರೆಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿಜಯನಗರ 2ನೇ ಹಂತದಲ್ಲಿರುವ ಬ್ಯಾಂಕ್‌ ಪ್ರಧಾನ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ‘ಜಿಲ್ಲೆಯ ಕೆ.ಆರ್‌.ನಗರದಲ್ಲಿನ ಬ್ಯಾಂಕ್ ಶಾಖೆಯಲ್ಲಿ 2013ರಲ್ಲಿ ದೊರೆಸ್ವಾಮಿ ಎಂಬುವರು ₹ 15 ಲಕ್ಷ ಸಾಲ ಪಡೆದಿದ್ದು, ₹ 18.98 ಲಕ್ಷ ಪಾವತಿ ಮಾಡಿದ್ದರೂ, ರೈತನ ಆಸ್ತಿಯನ್ನು ಕಬಳಿಸಲು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕಿದ್ದಾರೆ’ ಎಂದು ಆರೋಪಿಸಿದರು.

‘ಬ್ಯಾಂಕ್‌ ವಸೂಲಾತಿ ಕ್ರಮವು ಅನ್ಯಾಯವಾಗಿದ್ದು, ಹರಾಜನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಹುಣಸೂರು ತಾಲ್ಲೂಕಿನ ಹೆಜ್ಜೊಡ್ಲು ಗ್ರಾಮದ ಹೇಮಚಂದ್ರ ಹಾಗೂ ಶರತ್‌ಚಂದ್ರ ಅವರು ಮನೆ ನಿರ್ಮಾಣಕ್ಕಾಗಿ ಚಿಕ್ಕಬಸ್ತಿ ಶಾಖೆಯಲ್ಲಿ ಪಡೆದ ಸಾಲದ ಮೇಲೆ ಅಧಿಕ ಬಡ್ಡಿ ಹಾಗೂ ವೆಚ್ಚ ಸೇರಿಸಿ ವಸೂಲಿ ಮಾಡಲಾಗಿದ್ದು, ಅದನ್ನೂ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ನೇತ್ರಾವತಿ, ರೈತ ಸಂಘದ ಮುಖಂಡರಾದ ಪಿ.ಮರಂಕಯ್ಯ, ಆನಂದೂರು ಪ್ರಭಾಕರ್‌, ನಾಗನಹಳ್ಳಿ ಚಂದ್ರಶೇಖರ್‌, ಕುಮಾರಸ್ವಾಮಿ, ಪಾಪೇಗೌಡ ಪಾಲ್ಗೊಂಡಿದ್ದರು.

ಹರಾಜು ರದ್ದಿಗೆ ಆಗ್ರಹ ಪಾವತಿ ಅವಕಾಶಕ್ಕೆ ಒತ್ತಾಯ ಅಧಿಕ ಬಡ್ಡಿ ಕೈಬಿಡಿ: ಆ‌ಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT