ಮೈಸೂರು: ಜೊಂಡು ಹುಲ್ಲು ಬೆಳೆದು ದುರ್ವಾಸನೆ ಬೀರುತ್ತಿದ್ದ ಕೆರೆ ಈಗ ಅಭಿವೃದ್ಧಿಗೊಂಡು ಕಂಗೊಳಿಸುತ್ತಿದೆ. ತನ್ನೊಡಲ ಸೌಂದರ್ಯದಿಂದ ಪ್ರವಾಸಿಗರನ್ನು, ವಾಯು ವಿಹಾರ ಮಾಡುವವರನ್ನು ಕೈಬೀಸಿ ಕರೆಯುತ್ತಿದೆ.

ಇದು ಚಾಮುಂಡಿ ಬೆಟ್ಟದಲ್ಲಿರುವ ‘ಹಿರಿಕೆರೆ’ಯ ಹಿಗ್ಗು ಹೆಚ್ಚಿಸಿದ ಕಥೆ. 3 ಎಕರೆ 2 ಗುಂಟೆ ವಿಸ್ತೀರ್ಣವಿರುವ ಕೆರೆಯು ಸದಾ ನೀರಿನಿಂದ ತುಂಬಿದ್ದು, ಸ್ಥಳೀಯರಿಗೆ ಆಸರೆಯಾಗಿತ್ತು. ಆದರೆ ಈಚೆಗೆ ಪಾಳು ಬಿದ್ದಿತ್ತು. ಗಮನಹರಿಸುವವರಿಲ್ಲದೆ ಸುತ್ತಲೂ ಕಾಡು ಬೆಳೆದಿತ್ತು. ಹೂಳು ತುಂಬಿ ದುರ್ವಾಸನೆ ಬೀರುತ್ತಿತ್ತು.

ನೀರನ್ನು ಉಪಯೋಗಿಸದ ಕಾರಣ ಜೊಂಡು, ಪಾಚಿ ತುಂಬಿಕೊಂಡಿತ್ತು. ಊರಿಗೆ ಉಪಕಾರಿಯಾಗಬೇಕಿದ್ದ ಕೆರೆಯೇ ಅನಾಥವಾಗಿತ್ತು. ಇದೀಗ ಜೆ.ಕೆ ಟೈಯರ್ಸ್ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಕೆರೆಗಾಗಿ ವಿನಿಯೋಗಿಸಿದ್ದು, ಮೈರಾಡ ಸಂಸ್ಥೆಯು ಯೋಜನೆ ರೂಪಿಸಿ ಕೆರೆಗೆ ಮರುಜೀವ ನೀಡಿದೆ.

ಸುಮಾರು ₹85 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಸುತ್ತಲೂ ಏರಿ ನಿರ್ಮಿಸಿ, ಫೆನ್ಸಿಂಗ್ಗಳನ್ನು ಅಳವಡಿಸಿ ವಾಯುವಿಹಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಲುಷಿತಗೊಂಡು ದುರ್ವಾಸನೆ ಬೀರುತ್ತಿದ್ದ ಕೆರೆಯನ್ನು ಕಂಡು ದೂರ ಸರಿಯುತ್ತಿದ್ದವರು ನಿತ್ಯ ವಾಯುವಿಹಾರಕ್ಕಾಗಿ ಬರುತ್ತಿದ್ದಾರೆ.

‘ಆರಂಭದಲ್ಲಿ ಕಾಡು ತೆರವುಗೊಳಿಸಿ, ಅದರಲ್ಲಿದ್ದ ನೀರು ಹಾಗೂ ಹೂಳು ಹೊರತೆಗೆದು ಸ್ವಚ್ಛ ಮಾಡಿದೆವು. ನಂತರ ಒಡ್ಡು ನಿರ್ಮಿಸಲಾಯಿತು. ಮಣ್ಣು ಕುಸಿಯದಂತೆ ಕಲ್ಲು ಜೋಡಿಸಲಾಯಿತು. ಕೆರೆಗೆ ಇಳಿಯಲು ಮೆಟ್ಟಿಲಿನ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಮೈರಾಡ ಸಂಸ್ಥೆಯ ಅಶ್ರಫುಲ್ಲಾ ತಿಳಿಸಿದರು.

ಬೋಟಿಂಗ್ ಆರಂಭಿಸುವ ಚಿಂತನೆ

‘ಕೆರೆಯ ಅಭಿವೃದ್ಧಿ ಮಾಡಿರುವುದು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿದೆ. ಚಾಮುಂಡಿ ಬೆಟ್ಟದಲ್ಲಿರುವುದರಿಂದ ಇಲ್ಲಿಗೆ ಪ್ರವಾಸಿಗರನ್ನೂ ಆಕರ್ಷಿಸುವಂತೆ ಮಾಡಬೇಕು ಎಂಬ ಯೋಚನೆಯಿದೆ. ಅದಕ್ಕಾಗಿ ಬೋಟಿಂಗ್ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆಯೂ ಇದೆ. ಇಲ್ಲಿಂದ ಮುಖ್ಯರಸ್ತೆಗೆ ಸಂಪರ್ಕಿಸಲು ರಸ್ತೆ ನಿರ್ಮಿಸುವುದಕ್ಕಾಗಿ ದಾನಿಯೊಬ್ಬರು ಜಾಗ ಬಿಟ್ಟುಕೊಡುವುದಾಗಿ ಒಪ್ಪಿಕೊಂಡಿದ್ದು ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ರೂಪೇಶ್ ತಿಳಿಸಿದರು.

‘ಕೆರೆಯನ್ನು ಕೆಲವೇ ದಿನಗಳಲ್ಲಿ ಪಂಚಾಯಿತಿಗೆ ಬಿಟ್ಟುಕೊಡಲಿದ್ದಾರೆ. ಗ್ರಾಮದ ಕೆರೆಗಳಿಗೆ ಮರುಜೀವ ನೀಡುವುದರಿಂದ ಅಭಿವೃದ್ಧಿಗೆ ಕೈಜೋಡಿಸಬಹುದು’
ಕೆ.ಎಂ.ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.