ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನ ನೋಡಿ ದಾಖಲೆ ಬರೆದ ಬದರಿ ನಾರಾಯಣ್‌

Last Updated 25 ಜನವರಿ 2023, 3:39 IST
ಅಕ್ಷರ ಗಾತ್ರ

ಮೈಸೂರು: ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಬದರಿ ನಾರಾಯಣ್‌ ಅವರು, ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ಈ ಪ್ರಕ್ರಿಯೆಗೆ ಸೂರ್ಯ ಕಿರಣ ಕ್ರಿಯೆ ಎಂದು ಹೇಳುತ್ತೇವೆ. ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ. ಆದರೆ, ನಿರಂತರ ಪ್ರಾಣಾಯಾಮದ ಜೊತೆಗಿನ ಅಭ್ಯಾಸದ ಮೂಲಕ ನಾನು ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಇದನ್ನು ಯಾರೂ ಪ್ರಯತ್ನಿಸಬಾರದು’ ಎಂದು ಅವರು ವಿನಂತಿಸಿದರು.

ಯೋಗ ಗುರು ಕೆ.ರಾಘವೇಂದ್ರ ಪೈ ಮಾತನಾಡಿ, ‘ಈ ಯೋಗಕ್ಕೆ ತ್ರಾಟಕ ಕ್ರಿಯೆ ಎನ್ನುತ್ತಾರೆ. ಇದನ್ನು ಹಠ ಯೋಗಿಗಳು ಮಾತ್ರ ಸಾಧಿಸಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT