ಬುಧವಾರ, ಮಾರ್ಚ್ 29, 2023
27 °C

ಅಳಿಸಲಾಗದ ಶಾಯಿಗೆ ಚುನಾವಣಾ ಆಯೋಗ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಚುನಾವಣಾ ಆಯೋಗವು, ಮತದಾರರ ಕೈಬೆರಳಿಗೆ ಹಚ್ಚಲಾಗುವ ಅಳಿಸಲಾಗದ ಶಾಯಿಯನ್ನು ಪೂರೈಸುವಂತೆ ಇಲ್ಲಿನ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್‌)ಗೆ ಬೇಡಿಕೆ ಸಲ್ಲಿಸಿದೆ.

‘1.30 ಲಕ್ಷ ಬಾಟಲಿಗಳು (ಸಣ್ಣ ಸೀಸೆ, ತಲಾ 10 ಎಂ.ಎಲ್‌.) ಹಾಗೂ ಮತಯಂತ್ರಗಳ ಪ್ಯಾಕಿಂಗ್‌ ಸಂದರ್ಭದಲ್ಲಿ ಅಂಟಿಸಲು ಬಳಸುವುದಕ್ಕಾಗಿ 3.90 ಲಕ್ಷ ಅರಗು ಸ್ಟಿಕ್‌ಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಕಾರ್ಖಾನೆಯ ಸಿಬ್ಬಂದಿಯು ತಯಾರಿಕೆಯಲ್ಲಿ ತೊಡಗಿದ್ದಾರೆ. ಆಯೋಗವು ಯಾವುದೇ ಗಡುವು ನೀಡಿಲ್ಲ. ಸಿದ್ಧವಿಟ್ಟುಕೊಳ್ಳುವಂತೆ ಹೇಳಿದೆ. ಅದರಂತೆ ಕೆಲಸ ಆರಂಭಿಸಿದ್ದೇವೆ’ ಎಂದು ಮೈಲ್ಯಾಕ್ ಅಧ್ಯಕ್ಷ ರಘು ಆರ್.ಕೌಟಿಲ್ಯ ‘‍ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಇಲ್ಲಿಂದ 1.32 ಲಕ್ಷ ಬಾಟಲಿ ಅಳಿಸಲಾಗದ ಶಾಯಿಯನ್ನು ಚುನಾವಣಾ ಆಯೋಗ ಪಡೆದುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು