ನಂಜನಗೂಡು: ‘ನಗರದ ನೀಲಕಂಠ ನಗರ ಬಡಾವಣೆಯ 19ನೇ ವಾರ್ಡ್ನ ಅಸೆಸ್ಮೆಂಟ್. ನಂ. 3830/3680, 3831/3681ರ ನಿವೇಶನಗಳಿಗೆ ಪೋಟೋ ಕೂರಿಸಿ ಅಕ್ರಮ ಖಾತೆ ಮಾಡಿಕೊಟ್ಟು ಲಕ್ಷಾಂತರ ಬೆಲೆಯ ನಿವೇಶನಗಳನ್ನು ಕಬಳಿಸಲು ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಸಂಚು ನಡೆಸಿದ್ದಾರೆ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅನಂತ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಶೀಲಮ್ಮ ಎಂಬುವರು ನೀಲಕಂಠನಗರದ ಅರಳೀಕಟ್ಟೆ ಬಳಿ 4 ಮತ್ತು 5 ಸಂಖ್ಯೆಯ ನಿವೇಶನದ ಮಾಲೀಕರಾಗಿದ್ದಾರೆ, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಸುಶೀಲಮ್ಮನ ಅವರಿಗೆ ಸೇರಿದ ಈ ಎರಡು ನಿವೇಶನಗಳನ್ನು ಖರೀದಿಸಲು ಅವರಿಂದ ಕರಾರು ಒಪ್ಪಂದ ಮಾಡಿಕೊಂಡಿದ್ದಾರೆ, ಶ್ರೀಕಂಠಸ್ವಾಮಿ ಅಧ್ಯಕ್ಷರಾದ ನಂತರ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸುಶೀಲಮ್ಮನವರ 4 ಮತ್ತು 5 ಸಂಖ್ಯೆಯ ನಿವೇಶನಗಳ ದಾಖಲೆ ತಿದ್ದಿ, ನಗರಸಭೆಗೆ ಸೇರಿದ 41 ಮತ್ತು 42 ಸಂಖ್ಯೆಯ ನಿವೇಶನಗಳ ಫೋಟೋ ಕೂರಿಸಿ,ನಕಲಿ ದಾಖಲೆ ಸೃಷ್ಠಿಸಿಕೊಂಡು,ಈ ನಿವೇಶನಗಳನ್ನು ಕಬಳಿಸಲು ಹೊಂಚುಹಾಕಿದ್ದಾರೆ’ ಎಂದು ಆರೋಪಿಸಿದರು.

‘ಸದಸ್ಯೆ ಮಂಜುಳಾ ಅನಂತ ಅವರು ಈ ಬಗ್ಗೆ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ 2021ರಲ್ಲಿ ದೂರು ನೀಡಿದ್ದರೂ ಅಕ್ರಮ ತಡೆಯಲು ಅಧಿಕಾರಿಗಳು ಮುಂದಾಗಿಲ್ಲ, ಈ ಅವ್ಯವಹಾರದ ಬಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ದಾಖಲೆ ಸಮೇತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಮ್ಮ ಪಕ್ಷದ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ನಡೆಸುತ್ತಿರುವ ನಿವೇಶನಗಳ ಕಬಳಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಶಾಸಕರು ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಆಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಹೇಳಿದರು.

ನೀಲಕಂಠನಗರ ನಿವಾಸಿ ಮೀನಾಕ್ಷಿ ಮಾತನಾಡಿ, ‘ನಗರಸಭೆ ಸೇರಿದ ನಿವೇಶನವನ್ನು 6ತಿಂಗಳ ಹಿಂದೆ ₹25 ಲಕ್ಷ ನೀಡಿ ಅಫ್ತಾಬ್ ಅಹಮ್ಮದ್ ಎಂಬುವವರಿಂದ ಖರೀದಿಸಿದ್ದೇನೆ, ನಿವೇಶನದಲ್ಲಿ ಮನೆ ಕಟ್ಟಲು ಹೋದರೆ ಶ್ರೀಕಂಠಸ್ವಾಮಿ ಕಡೆಯವರು ನಮ್ಮ ಪೂರ್ವಿಕರಿಗೆ ಸೇರಿದ 2 ಎಕರೆ ಜಾಗದಲ್ಲಿ ನಿವೇಶನವಿದೆ, ಈ ಜಾಗ ನಮಗೆ ಸೇರಿದ್ದು ಎಂದು ಗಲಾಟೆ ಮಾಡಿ, ಮನೆ ಕಟ್ಟಿಕೊಳ್ಳಲು ಅಡ್ಡಿಮಾಡುತ್ತಿದ್ದಾರೆ. ದೂರು ನೀಡಲು ಅಧ್ಯಕ್ಷರ ಬಳಿ ಹೋದಾಗ ಆ ನಿವೇಶನವನ್ನು ನಾನೇ ಖರೀದಿಸುತ್ತೇನೆ ಎಂದು ಕಡಿಮೆ ಬೆಲೆಗೆ ಕೊಟ್ಟು ಹೋಗಿ, ನೀವು ಮನೆ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಾರೆ, ಈ ಅನ್ಯಾಯದ ವಿರುದ್ದ ಶಾಸಕರು , ನಮಗೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ನಮ್ಮ ಕುಟುಂಬ ಸಮೇತವಾಗಿ ಎಲ್ಲರೂ ನಗರಸಭೆ ಮುಂಭಾಗ ವಿಷ ಕೂಡಿದು ಸಾಯುತ್ತೇವೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು, ನಗರಸಭೆ ಸದಸ್ಯ ಪಿ.ದೇವ, ಮುಖಂಡರಾದ ಚಾಮಲಾಪುರದ ಹುಂಡಿ ಶಂಕರಪ್ಪ, ರಾಘವೇಂದ್ರ, ಜಯಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.