ಎಚ್.ಡಿ. ಕೋಟೆ: ಸರಗೂರು ಪಟ್ಟಣದದ ಖಾಸಗಿ ಕ್ಲಿನಿಕ್ನ ವೈದ್ಯರೊಬ್ಬರು (ಚೈತ್ರಶೆಟ್ಟಿ) ಅವೈಜ್ಞಾನಿಕ ಚಿಕಿತ್ಸೆ ನೀಡಿ ನನಗೆ ಅನಾರೋಗ್ಯಪೀಡಿತರಾಗುವಂತೆ ಮಾಡಿದ್ದಾರೆ ಎಂದು ಹೊಸಹೊಳಲು ಗ್ರಾಮದ ಗೋವಿಂದಯ್ಯ ಆರೋಪಿಸಿದರು.

‘ನನಗೆ ಅಲರ್ಜಿಯಾದ ಹಿನ್ನೆಲೆಯಲ್ಲಿ ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದೆ, ಅವರು ಪ್ರತಿ ಮೂರು ದಿನಗಳಿಗೊಮ್ಮೆ ಸತತ ಆರು ತಿಂಗಳವರಗೆ ಇಂಜಕ್ಷನ್ ನೀಡಿದ್ದು, ಇದರ ಪರಿಣಾಮ ಅಲರ್ಜಿ ಮತ್ತಷ್ಟು ಹೆಚ್ಚಾಗಿದೆ. ಇಂಜಕ್ಷನ್ ನೀಡಿದ ಜಾಗದಲ್ಲೆಲ್ಲಾ ದೊಡ್ಡ ದೊಡ್ಡ ಗಂಟುಗಳಾಗಿವೆ. ಅವರು ನೀಡಿದ ಮಾತ್ರೆಗಳನ್ನು ಆರು ತಿಂಗಳು ಪಡೆದಿದ್ದು, ಒಂದು ಮಾತ್ರೆಗೆ ₹40ರಂತೆ ಇದುವರೆಗೂ ₹60 ಸಾವಿರಕ್ಕೂ ಹೆಚ್ಚು ವ್ಯಯವಾಗಿದೆ, ಒಂದು ಇಂಜಕ್ಷನ್ಗೆ ₹500ರಂತೆ ಒಟ್ಟು ₹1.50 ಲಕ್ಷ ವ್ಯಯವಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಕೂಲಿ ಮಾಡಿ ಸಂಸಾರ ಸಾಕುತ್ತಿದ್ದು, ಈ ಸಮಸ್ಯೆ ಹೆಚ್ಚಾಗಿದ್ದರಿಂದ ಕೂಲಿ ಮಾಡಲು ಶಕ್ತಿ ಇಲ್ಲವಾಗಿದೆ, ನನ್ನ ಕುಟುಂಬಕ್ಕೆ ಒಂದೊತ್ತಿನ ಕೂಳಿಗೆ ತೊಡಕಾಗಿದೆ’ ಎಂದರು.

‘ನನಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಅವರಿಗೆ ದೂರು ಸಲ್ಲಿಸಿದ್ದು, ಕ್ರಮ ವಹಿಸುವ ಭರವಸೆ ನೀಡಿದ್ದಾರೆ’ ಎಂದರು.