ಶುಕ್ರವಾರ, ಮಾರ್ಚ್ 31, 2023
25 °C

ಧಾರ್ಮಿಕ ಅವಹೇಳನ: ಲೇಖಕ ಕೆ.ಎಸ್‌.ಭಗವಾನ್ ವಿರುದ್ಧದ ಪ್ರಕರಣ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಲೇಖಕರಾದ ಕೆ.ಎಸ್‌.ಭಗವಾನ್, ಮಹೇಶ್‌ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ವಿರುದ್ಧ 2016ರಲ್ಲಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬುಧವಾರ ವಜಾಗೊಳಿಸಿರುವ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅವರನ್ನು ಆರೋಪ ಮುಕ್ತಗೊಳಿಸಿದೆ. 

‘ಮಾನಸ ಗಂಗೋತ್ರಿ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂದು ಮೂವರನ್ನು ಆರೋಪಿಗಳನ್ನಾಗಿಸಿ ಅಲ್ಲಿನ ಅಧ್ಯಾಪಕರು ದೂರು ನೀಡಿದ್ದರು. ಕಕ್ಷಿದಾರರ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೋರ್ಟ್ ಆರೋಪ ಮುಕ್ತಗೊಳಿಸಿದೆ’ ಎಂದು ಭಗವಾನ್‌ ಪರ ವಕಾಲತ್ತು ವಹಿಸಿದ್ದ ವಕೀಲ ಅಪ್ಪಾಜಿಗೌಡ ತಿಳಿಸಿದರು.

ಈ ಕುರಿತ ಪ್ರತಿಕ್ರಿಯೆಗೆ ಮೂವರೂ ಲಭ್ಯವಾಗಲಿಲ್ಲ. 

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು