ಮೈಸೂರು: ಆ. 5ರಿಂದ 10ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಮಹಾರಾಣಿ ಟ್ರೋಫಿ’ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಟೀಮ್ ಇಂಡಿಯಾ ಆಟಗಾರ್ತಿ ಶುಭಾ ಸತೀಶ್ ಮುನ್ನಡೆಸಲಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಂಡದ ನಾಯಕಿಯ ಹೆಸರನ್ನು ಘೋಷಿಸಲಾಯಿತು. ತಂಡದ ಇತರ 15 ಮಂದಿ ಆಟಗಾರ್ತಿಯರ ಪರಿಚಯವನ್ನು ಮಾಡಿಕೊಡಲಾಯಿತು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಇದೇ ಮೊದಲ ಬಾರಿಗೆ ಟಿ-20 ಮಾದರಿಯಲ್ಲಿ ಮಹಿಳೆಯರಿಗೆ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು, ಬೆಂಗಳೂರಿನ ಹೊರವಲಯದಲ್ಲಿ ಇರುವ ಆಲೂರಿನ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ.

ನಾಯಕಿ ಶುಭಾ ಸತೀಶ್, ತಂಡದ ಮುಖ್ಯ ಕೋಚ್ ಕರುಣಾ ಜೈನ್ ಮಾತನಾಡಿದರು. ಮೈಸೂರು ವಾರಿಯರ್ಸ್ನ ಧ್ಯೇಯಗೀತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಯಿತು. ಕೇರ್ಗಳ್ಳಿಯ ಕಸ್ತೂರ್ ಬಾ ಗಾಂಧಿ ಬಾಲಕಿಯರ ವಿದ್ಯಾಲಯಕ್ಕೆ ಕ್ರೀಡಾ ಸಲಕರಣೆಯನ್ನು ವಿತರಣೆ ಮಾಡಲಾಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಶುಭಾ ಸತೀಶ್ ಮೈಸೂರಿನವರೇ ಆಗಿದ್ದು ನಮ್ಮ ತಂಡವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ
ಅರ್ಜುನ್ ರಂಗಮೈಸೂರು ವಾರಿಯರ್ಸ್ ತಂಡದ ಮಾಲೀಕ

ಮೈಸೂರು ವಾರಿಯರ್ಸ್ ತಂಡ:

ಶುಭಾ ಸತೀಶ್ (ನಾಯಕಿ) ಸಹನಾ ಪಿ.ಪವಾರ್ ಪೂಜಾ ಕುಮಾರಿ ಶಿಶಿರಾ ಗೌಡ ರೋಹಿತಾ ಚೌಧರಿ ವಂದಿತಾ ಕೆ.ರಾವ್ ದೀಕ್ಷಿತಾ ಜೆ.ಹೊನ್ನುಶ್ರೀ ಎನ್.ಜಿ.ಪ್ರಕೃತಿ ತನ್ವಿ ಎಸ್.ರಾಜ್ ಶ್ರೇಯ ಪೊಟೆ ರಚಿತಾ ಹತ್ವಾರ್ ಕಿಂಜಲ್ ಪಟೇಲ್ ಅಲಂ ರಿಹಾ ಸೈಯದ್ ಎ.ರೂಹಿ ಕುಸುಮಾ ಗೌಡ ಸಿಲ್ಕಿನ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.