ಮೈಸೂರು: ‘ಇಂಧನ ಸೋರಿಕೆ, ವಿದ್ಯುತ್ ಅಡಚಣೆ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾಂತ್ರಿಕ ನಿರ್ವಹಣೆ ಅವಶ್ಯವಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ತಾಂತ್ರಿಕ ನಿರ್ವಹಣೆಗೆ ಮುಂದಾಗಬೇಕು’ ಎಂದು ಸೆಸ್ಕ್ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧಿಕಾರಿಗಳಿಗೆ ಕೆಇಬಿಇಎ ಮೈಸೂರು ವಲಯ ಕೇಂದ್ರದಿಂದ ಕಡಕೊಳದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್ಗಳ ಸಂಘ(ಕೆಇಬಿಇಎ)ದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಇಂಧನ(ವಿದ್ಯುತ್) ಲೆಕ್ಕ ಪರಿಶೀಲನೆ ಮತ್ತು ಐಪಿ ಫೀಡರ್ನಲ್ಲಿ ನಷ್ಟ ಕಡಿತ’ ವಿಷಯದ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಧನ ಸೋರಿಕೆ ತಡೆಯುವಲ್ಲಿ ತಾಂತ್ರಿಕ ಪರಿಣತಿ ಮುಖ್ಯವಾಗಿದೆ. ಈ ಹಿಂದೆ ಸಕಲೇಶಪುರದ ಬಾಳುಪೇಟೆ ಫೀಡರ್ನಲ್ಲಿ ಎನರ್ಜಿ ಆಡಿಟಿಂಗ್ ನಡೆಸಿದ ಸಂದರ್ಭ ಶೇ.40ರಿಂದ 43ರಷ್ಟು ಇಂಧನ ಸೋರಿಕೆ ಕಂಡುಬಂದಿತ್ತು. ಬಳಿಕ ಸಮರ್ಪಕ ತಾಂತ್ರಿಕ ನಿರ್ವಹಣೆ ಮಾಡಿದ ಪರಿಣಾಮವಾಗಿ ಇಂಧನ ಸೋರಿಕೆಯನ್ನು ಶೇ.12ಕ್ಕೆ ಇಳಿಕೆ ಮಾಡುವಲ್ಲಿ ಯಶಸ್ವಿಯಾದೆವು. ಇದರಿಂದ ನಿಗಮಕ್ಕೆ ಆದಾಯ ಹೆಚ್ಚಿತು, ವಿದ್ಯುತ್ ಅಡಚಣೆ ಕಡಿಮೆಯಾಗಿ, ಫೀಡರ್ಗಳು, ಟ್ಯಾನ್ಸ್ಫಾರ್ಮರ್ಗಳು ಮತ್ತು ಮೀಟರ್ಗಳ ನಿರ್ವಹಣೆ ಸುಲಭಗೊಂಡಿತು’ ಎಂದು ಉದಾಹರಿಸಿದರು.

‘ಪ್ರಸ್ತುತ ಇಂಧನ ಇಲಾಖೆ ಹೊಸತನಕ್ಕೆ ಆದ್ಯತೆ ನೀಡಿ, 5ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲು ಕಾರ್ಯಯೋಜನೆ ರೂಪಿಸಿದೆ. ಮುಂದಿನ ಒಂದು ವರ್ಷದಲ್ಲಿ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ. ಇದರ ನಡುವೆ ಸೆಸ್ಕ್ ವ್ಯಾಪ್ತಿಯಲ್ಲಿ 90 ಸ್ಟೇಷನ್ಗಳನ್ನು ಪ್ರಸಕ್ತ ವರ್ಷದಲ್ಲಿ ಹಾಕಲಾಗುವುದು. ಪ್ರಮುಖವಾಗಿ ನಿಗಮದ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಬಲಪಡಿಸಿ, ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ ಹೊಸದಾಗಿ 100 ಫೀಡರ್ಗಳನ್ನು ಹೊಸದಾಗಿ ಗ್ರಿಡ್ಗಳಿಗೆ ಸೇರ್ಪಡೆ ಮಾಡಬೇಕಿದೆ’ ಎಂದು ತಿಳಿಸಿದರು.

‘ತರಬೇತಿಯಲ್ಲಿ ನೀಡುವ ಸಲಹೆಗಳನ್ನು ಪಡೆದು, ಅವುಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಬೇಕು. ಸೋರಿಕೆ ಇರುವ ಫೀಡರ್ಗಳಲ್ಲಿ ತಾಂತ್ರಿಕ ಪರಿಣತಿ ಅಳವಡಿಸಿ, ಇಂಧನ ಸೋರಿಕೆ ಪ್ರಮಾಣವನ್ನು ತಗ್ಗಿಸಬೇಕಾಗಿದೆ. ಇದರೊಂದಿಗೆ ನಮ್ಮಲ್ಲಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಿರ್ದಿಷ್ಟ ಗುರಿ ಸಾಧಿಸಲು ಕಾರ್ಯಯೋಜನೆ ರೂಪಿಸಬೇಕಿದೆ’ ಎಂದರು.

ತಾಂತ್ರಿಕ ಕಾರ್ಯಾಗಾರದಲ್ಲಿ ನಿವೃತ್ತ ತಾಂತ್ರಿಕ ನಿರ್ದೇಶಕ ಎಸ್. ಮಹೇಶ್ ‘ಇಂಧನ(ವಿದ್ಯುತ್) ಲೆಕ್ಕಪರಿಶೀಲನೆಯ ತಂತ್ರಗಳು, ಇಂಧನ ಸೋರಿಕೆ ಹಾಗೂ ಆರ್ಥಿಕ ನಷ್ಟವನ್ನು ಕಡಿತಗೊಳಿಸುವ ಪ್ರಾಯೋಗಿಕ ಅಂಶ’ಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಎಸ್ಇ ಸುನೀಲ್, ಮುಖ್ಯ ಎಂಜಿನಿಯರ್ಗಳಾದ ಮೃತ್ಯುಂಜಯ, ಸೋಮಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಕೆಇಬಿಇಎ ಉಪಾಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರಾಜ್ಯ ಕಾರ್ಯದರ್ಶಿ ಆರ್. ಸುಧೀರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.