ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಬಾಗಿಲು ಮುರಿದು ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published 4 ಮೇ 2024, 15:59 IST
Last Updated 4 ಮೇ 2024, 15:59 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಪಟ್ಟಣದ ಮನೆಯೊಂದರ ಬಾಗಿಲನ್ನು ಗುರುವಾರ ರಾತ್ರಿ ಮುರಿದು ಒಳ ನುಗ್ಗಿದ ಕಳ್ಳರು ₹ 10 ಲಕ್ಷ ಮೌಲ್ಯದ ಚಿನ್ನಾಭರಣ, ₹ 45 ಸಾವಿರ ನಗದು ಕದ್ದೊಯ್ದಿದ್ದಾರೆ.

ಮುಸ್ಲಿಂ ಬ್ಲಾಕ್ ನಿವಾಸಿ ನ್ಯಾಯಬೆಲೆ ಅಂಗಡಿ ಮಾಲೀಕ ಮುಷರತ್ ಪಾಷಾ ಅವರ ಮನೆಯಲ್ಲಿ ಈ ಕಳ್ಳತನವಾಗಿದ್ದು, ಮುಷರತ್ ಹಾಗೂ ಸಹೋದರ ನೂರ್ ಅಹಮದ್ ಎರಡೂ ಕುಟುಂಬದವರು ಈಚೆಗೆ ಹೈದರಾಬಾದ್ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆಯಲ್ಲಿ ಘಟನೆ ನಡೆದಿದ್ದು, ಸಿದ್ದಪ್ಪಾಜಿ ರಸ್ತೆಯ ಅರಳಿ ಮರದ ಬಳಿ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಇತರ ದಾಖಲಾತಿಗಳನ್ನು ಬಿಸಾಡಿ ಹೋಗಿದ್ದಾರೆ. ಶುಕ್ರವಾರ ಅವರು ಮರಳಿ ಊರಿಗೆ ಬಂದಾಗ ವಿಷಯ ಗೊತ್ತಾಗಿದೆ.

ವೃತ್ತ ನಿರೀಕ್ಷಕ ಶಬ್ಬೀರ್ ಹುಸೈನ್, ಪಿಎಸ್‌ಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT