ಕೊಳ್ಳೇಗಾಲ: ತಾಲ್ಲೂಕಿನ ತೇರಂಬಳ್ಳಿಯ ಕಬ್ಬಿನ ಚ ಎರಡು ವರ್ಷದ ಗಂಡು ಮಗು ಶನಿವಾರ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿತು. ಮಗುವು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬುವರದ್ದು.

ಪ್ರತಿವರ್ಷ ಬಳ್ಳಾರಿ ಜಿಲ್ಲೆಯಿಂದ ನಾಲ್ಕೈದು ಕುಟುಂಬದವರು ಕಬ್ಬು ಕಟಾವು ಮಾಡಲು ಎರಡು ಮೂರು ತಿಂಗಳುಗಳ ಕಾಲ ಕುಟುಂಬ ಸಮೇತರಾಗಿ ಬಂದು ವಾಸ್ತವ್ಯ ಹೂಡುತ್ತಿದ್ದರು. ಶನಿವಾರ ಕುಳ್ಳೇಗೌಡ ಅವರ ಜಮೀನಿನಲ್ಲಿ ಕಟಾವು ಮಾಡುತ್ತಿದ್ದಾಗ ದುರ್ಘಟನೆ ನಡೆಯಿತು.

ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅಗರ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರಂಚಿ: ಹುಲಿ ಹೆಜ್ಜೆ ಗುರುತು ಪತ್ತೆ

ಹುಣಸೂರು: ವೀರನಹೊಸಹಳ್ಳಿ ವಲಯದಂಚಿನ ಗ್ರಾಮ ಹಾಗೂ ಗದ್ದೆ ಬಯಲಿನಲ್ಲಿ ಅರಣ್ಯ ಇಲಾಖೆಯಿಂದ ಹುಲಿ ಪತ್ತೆಗೆ ಎರಡನೇ ದಿನದ ಕೊಂಬಿಂಗ್ ಕಾರ್ಯಾಚರಣೆ ಮುಂದುವರಿಯಿತು. ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಅಭಿಷೇಕ್ ಮಾತನಾಡಿ ಎರಡನೇ ದಿನ ಟಿಬೆಟ್ ನಿರಾಶ್ರಿತರ ತಾಣ ಗುರುಪುರ ವಾರಂಚಿ ಚೌಡಿಕಟ್ಟೆ ಹೊಸೂರು ತಂಬಾಕು ಬೋರ್ಡ್ ಭಾಗದಲ್ಲಿ ಭೀಮ ಆನೆ ಬಳಸಿ ಕಾರ್ಯಾಚರಣೆ ನಡೆಸಲಾಯಿತು. ವಾರಂಚಿ ಭಾಗದ ಗದ್ದೆ ಬಯಲಿನಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಾಖೆ ಗಂಭೀರವಾಗಿ ಪರಿಗಣಿಸಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿದೆ. ಹೆಚ್ಚಿನ ಆನೆ ಬೇಕಾದಲ್ಲಿ ಇಲಾಖೆಯಿಂದ ಪಡೆದು ಮತ್ತಷ್ಟು ತೀವ್ರಗೊಳಿಸಿ ಸಾರ್ವಜನಿಕರ ಆತಂಕ ದೂರಮಾಡಲಾಗುವುದು ಎಂದರು.

ಹಳೆ ಹುಲಿ: ಅರಣ್ಯದಂಚಿನ ಪ್ರದೇಶದಲ್ಲಿ ಓಡಾಡಿರುವ ಹೆಜ್ಜೆ ಗುರುತು ಆಧರಿಸಿ ಹಳೆ ಹುಲಿ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಹುಲಿ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸಿ ರೂಢಿಯಾಗಿದ್ದು ಅರಣ್ಯದಿಂದ ಹೊರ ಬಂದು ಒಳಕ್ಕೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.