ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಗನೂರು: ಹುಲಿ ಹೆಜ್ಜೆ ಪತ್ತೆ

Published 7 ಸೆಪ್ಟೆಂಬರ್ 2023, 13:48 IST
Last Updated 7 ಸೆಪ್ಟೆಂಬರ್ 2023, 13:48 IST
ಅಕ್ಷರ ಗಾತ್ರ

ಹನಗೋಡು: ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ನಾಗರಹೊಳೆ ಅರಣ್ಯದಂಚಿನಿಂದ ಕೂಗಳತೆ ದೂರದಲ್ಲಿರುವ ಮುದಗನೂರು ಗ್ರಾಮದ ಮುಸುಕಿನ ಜೋಳದ ಹೊಲದಲ್ಲಿ ಬುಧವಾರ ರಾತ್ರಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ರೈತರಲ್ಲಿ ಆತಂಕ ಮೂಡಿಸಿದೆ.

ಈ ಭಾಗದಲ್ಲಿ ಕಳೆದ ಎರಡು- ಮೂರು ದಿನಗಳಿಂದ ಜಮೀನಿನ ಅಕ್ಕಪಕ್ಕದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಇದರಿಂದಾಗಿ ಅರಣ್ಯದಂಚಿನ ಹೊಲಗಳಿಗೆ ರೈತರು ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಸಮೀಪದ ಕೊಳವಿಗೆ ಹಾಡಿಯಲ್ಲಿ ಹುಲಿ ದಾಳಿಗೆ ಯುವಕನೊಬ್ಬ ಮೃತಪಟ್ಟಿದ್ದ. ಅಂತರಸಂತೆ ವಲಯದಲ್ಲಿ ಬಾಲಕನೊಬ್ಬನಿಗೆ ಹುಲಿ ದಾಳಿ ಮಾಡಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಕೂಡಲೇ ಅರಣ್ಯ ಇಲಾಖೆ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯ ಬೇಕೆಂದು ಎಂದು ಮುದಗನೂರು ಗ್ರಾಮದ ರೈತ ಸಂಘಟನೆಯ ಮಹದೇವ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT