ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಸಂಚಾರಕ್ಕೆ ಅಡ್ಡಿ: ಪ್ರಕರಣ ದಾಖಲು

Published 27 ಜೂನ್ 2024, 15:55 IST
Last Updated 27 ಜೂನ್ 2024, 15:55 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಚಾರಕ್ಕೆ ಅಡ್ಡಿಪಡಿಸಿದ ಬೈಕ್ ಸವಾರ, ವರುಣ ಗ್ರಾಮದ ಕುಂಬ್ರಳ್ಳಿ ನಿವಾಸಿ ಶಿವು (30) ವಿರುದ್ಧ ನಗರದ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್‌ 23ರಂದು ಮುಖ್ಯಮಂತ್ರಿ ಕಾರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಜರ್‌ಬಾದ್ ಕಡೆಗೆ ಸಾಗುತ್ತಿತ್ತು. ಕಾರು ಸಾಗುವ ಮೈಸೂರು– ನಂಜನಗೂಡು ಹೆದ್ದಾರಿಯ ರಾಜಹಂಸ ಜಂಕ್ಷನ್ ಬಳಿ ಬ್ಯಾರಿಕೇಡ್‌ ಅಳವಡಿಸಿ ಗನ್‌ಹೌಸ್ ರಸ್ತೆಯಿಂದ ಬರುವ ವಾಹನ ನಿಯಂತ್ರಿಸುವ ಕರ್ತವ್ಯದಲ್ಲಿ ಸಂಚಾರ ವಿಭಾಗದ ಸಿಬ್ಬಂದಿ ಅಣ್ಣಯ್ಯ ಹಾಗೂ ಉಪೇಂದ್ರ ಇದ್ದರು.

ಈ ಸಮಯದಲ್ಲಿ ಶಿವು ತನ್ನ ಯಮಹಾ ಬೈಕ್‌ನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ. ಇದನ್ನು ಗಮನಿಸಿದ ಅಣ್ಣಯ್ಯ ಹಾಗೂ ಉಪೇಂದ್ರ ಬೈಕ್ ನಿಲ್ಲಿಸುವಂತೆ ಸೂಚಿಸಿದರೂ, ಅದನ್ನು ಲೆಕ್ಕಿಸದೆ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬ್ಯಾರಿಕೇಡ್‌ ಭೇದಿಸಿ ಮುಖ್ಯಮಂತ್ರಿ ಕಾರು ಬರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಅತಿ ವೇಗವಾಗಿ ಚಲಿಸಿ ನಂತರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಗಾಯಗೊಂಡ ಆತನನ್ನು ಮುಖ್ಯಮಂತ್ರಿ ಕಾರಿನ ಹಿಂದೆ ಬರುತ್ತಿದ್ದ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸ್‌ಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಶಿವು ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT