ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ‘ಅಬಿವೃದ್ಧಿಯ ವರ್ಷಧಾರೆ’ ಆಗುತ್ತಿದೆ. ಒಂದೇ ದಿನ ಬರೋಬ್ಬರಿ ₹1,107.72 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾಮಗಾರಿ ನೆರವೇರಲಿದೆ. ಹಲವು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯೂ ನಡೆಯಲಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಆ.9ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸಮಾರಂಭ ನಡೆಯಲಿದೆ. ₹ 1,065.27 ಕೋಟಿ ಮೊತ್ತದ 295 ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ₹42.45 ಕೋಟಿ ಮೊತ್ತದ ವಿವಿಧ 22 ಕಾಮಗಾರಿಗಳ ಉದ್ಘಾಟನೆಯೂ ನಡೆಯಲಿದೆ. ಒಟ್ಟು 371 ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಹದಿನಾರು ಗ್ರಾಮ ಸಾಕ್ಷಿಯಾಗಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೋದ ವರ್ಷದ ಅಕ್ಟೋಬರ್ನಲ್ಲಿ ಒಟ್ಟು ₹ 501 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸೌಲಭ್ಯ ವಿತರಣೆ ಕಾರ್ಯಕ್ರಮ ನೆರವೇರಿತ್ತು. ಈ ಬಾರಿ ದ್ವಿಗುಣ ಮೊತ್ತದ ಕೊಡುಗೆಯನ್ನು ಮುಖ್ಯಮಂತ್ರಿ ತಮ್ಮ ಕ್ಷೇತ್ರಕ್ಕೆ ಕೊಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸ್ವಗ್ರಾಮವಾದ ಹದಿನಾರು ಗ್ರಾಮದಲ್ಲಿ ಸಮಾರಂಭ ನಡೆಯುತ್ತಿರುವುದು ವಿಶೇಷ.

ಸ್ವಗ್ರಾಮದಲ್ಲಿ...:

ಹೊಸಹಳ್ಳಿ ಹಾಗೂ ಮುಖ್ಯಮಂತ್ರಿ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಅಚ್ಚುಕಟ್ಟು ಭೂಮಿ ಕಬಳಿಸುವುದನ್ನು ತಪ್ಪಿಸಲು ಗಿರಿಬೆಟ್ಟದ ಕೆರೆ ಬೆಟ್ಟದ ಡ್ರಾಫ್ಟ್ ಕಣಿವೆಯನ್ನು ರಕ್ಷಿಸಲು ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ.

ಜಲಸಂಪನ್ಮೂಲ ಇಲಾಖೆ ಒಂದರಿಂದಲೇ ಒಟ್ಟು ₹ 636.92 ಮೊತ್ತದಲ್ಲಿ 117 ಕಾಮಗಾರಿ ನಡೆಯಲಿದೆ. ಇದರಲ್ಲಿ ವಿವಿಧ ಕೆರೆಗಳ ಅಭಿವೃದ್ಧಿ, ರಸ್ತೆಗಳ ನಿರ್ಮಾಣ ಕಾಮಗಾರಿಗಳು ಪ್ರಮುಖವಾಗಿವೆ.

ಚಿಕ್ಕನಂದಿ ಏತ ನೀರಾವರಿ ಯೋಜನೆಯಿಂದ ಕೊನೆಯ ಹಂತದ ಕೆರೆಗಳನ್ನು ತುಂಬಿಸಲು ಹೆಚ್ಚುವರಿ ನೀರಿನ ಅಗತ್ಯವಿದ್ದು, ಇದರ ಸಲುವಾಗಿ ಡಿ.ಡಿ. ಅರಸು ನಾಲೆಯ 74 ಕಿ.ಮೀ. ಸರಪಳಿಯ ನಂತರದ ನಾಲೆಯ ಪುನರ್ನಿರ್ಮಾಣ ಕಾಮಗಾರಿಗೆ ಬರೋಬ್ಬರಿ ₹ 103 ಕೋಟಿ ಒದಗಿಸಲಾಗಿದೆ.

ಅಹಲ್ಯ ಗ್ರಾಮದ ಬೈರವೇಶ್ವರ ದೇವಸ್ಥಾನದ ರಸ್ತೆ ಸುಧಾರಣೆಗೆ ₹ 1 ಕೋಟಿ ಕೊಡಲಾಗಿದೆ. ಅಂತೆಯೇ ವಿವಿಧ ದೇವಸ್ಥಾನಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಕಾವೇರಿ ನೀರಾವರಿ ನಿಗಮ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ, ಸಣ್ಣ ನೀರಾವರಿ, ಆಯುಷ್, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಶಿಕ್ಷಣ, ಗಣಿ ಮತ್ತು ಭೂವಿಜ್ಞಾನ ಹಾಗೂ ಪಶುಸಂಗೋಪನೆ ಇಲಾಖೆಗಳು, ಕೆಪಿಟಿಸಿಎಲ್, ಕೆಐಎಡಿಬಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ನಗರಾಭಿವೃದ್ಧಿ ಕೋಶ (ಪೌರಾಡಳಿತ), ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗ, ನಿರ್ಮಿತಿ ಕೇಂದ್ರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

5819 ಮನೆಗಳು ಮಂಜೂರು

ವರುಣ ಕ್ಷೇತ್ರ ರಚನೆಯಾದ ದಿನದಿಂದ ಈವರೆಗೆ ವಿವಿಧ ವಸತಿ ಯೋಜನೆಯಡಿ 44054 ಮನೆಗಳು ಮಂಜೂರಾಗಿದ್ದು 30219 ಮನೆಗಳು ಪೂರ್ಣಗೊಂಡಿವೆ. 2024–25ನೇ ಸಾಲಿನಲ್ಲಿ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ 3068 ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 2751 ಸೇರಿದಂತೆ ಒಟ್ಟು 5819 ಮನೆಗಳು ಮಂಜೂರಾಗಿವೆ. ಈ ಪೈಕಿ ಶನಿವಾರ ಸಾಂತೇತಿಕವಾಗಿ ಐವರು ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ಹಾಗೂ ಕಾಮಗಾರಿ ಆದೇಶಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ. 31 ಮಂದಿ ಸಂಜೀವಿನಿ ಮಹಿಳಾ ಸದಸ್ಯರಿಗೆ ಕೊಳಾಯಿ–ವಿದ್ಯುತ್ ಕೆಲಸಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದ್ದು ಅವರಿಗೆ ಟೂಲ್ಕಿಟ್ಗಳನ್ನು ಮತ್ತು ಕೃಷಿ ಇಲಾಖೆಯಿಂದ ಒಟ್ಟು 193 ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸುವರು. ಆರೋಗ್ಯ ಇಲಾಖೆಯ ‘ಆಶಾಕಿರಣ’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಅರ್ಹ ವಯಸ್ಕರಿಗೆ ಉಚಿತವಾಗಿ ಕನ್ನಡಗಳನ್ನು ವಿತರಿಸಲಾಗುತ್ತಿದ್ದು 2024–25ನೇ ಸಾಲಿನಲ್ಲಿ 9ಸಾವಿರ ಫಲಾನುಭವಿಗಳಿಗೆ ಅಂದಾಜು ₹ 96 ಲಕ್ಷ ಭರಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐವರಿಗೆ ಕನ್ನಡಕ ವಿತರಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.