ಹುಣಸೂರು: ವಿಶ್ವಕರ್ಮ ಸಮುದಾಯ ಸಮಾಜದಲ್ಲಿನ ಎಲ್ಲ ಧರ್ಮವನ್ನು ಗೌರವಿಸಿ, ಸರ್ವ ಧರ್ಮಗಳ ಆಚಾರ ವಿಚಾರಕ್ಕೆ ಸ್ಪಂದಿಸಿ ನೈಜವಾದ ಜಾತ್ಯತೀತ ಪದ್ಧತಿಯನ್ನು ಅಳವಡಿಸಿಕೊಂಡಿದೆ ಎಂದು ವಿಶ್ವ ಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆಂಡಗಣ್ಣ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ನಡೆದ ವಿಶ್ವ ಕರ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮ ಹೆಸರು ಒಂದು ಜಾತಿಯಲ್ಲ, ಇದು ಸಂಸ್ಕೃತಿ. ಇತ್ತೀಚಿನ ಜಾತಿ ವ್ಯವಸ್ಥೆಯಲ್ಲಿ ವೃತ್ತಿಯನ್ನು ಜಾತಿಯನ್ನಾಗಿಸಿಕೊಳ್ಳಲಾಗಿ, ವಿಶ್ವಕರ್ಮ ಎಂಬುದು ಜಾತಿಯಾಗಿ ಮಾರ್ಪಟ್ಟಿದೆ. ಈ ಸಮಾಜ ಪ್ರತಿ ಧರ್ಮವನ್ನು ಗೌರವಿಸಿ, ಪಂಚ ಕಸುಬುಗಳನ್ನು ನಿರ್ವಹಿಸಿ, ಮನುಷ್ಯನ ಹುಟ್ಟಿನಿಂದ ಅಂತಿಮದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡಿ ಬದುಕು ಕಟ್ಟಿಕೊಂಡಿದೆ ಎಂದರು.

ವಿಶ್ವಕರ್ಮ ಸಮಾಜ ತ್ರೇತಾಯುಗದಿಂದ ಕಲಿಯುಗದವರೆಗೂ ಒಂದೊಂದು ರೀತಿಯಾಗಿ ಸಾಮಾಜಿಕ ಕೊಡುಗೆಯಲ್ಲಿ ತೊಡಗಿಸಿಕೊಂಡಗಿದ್ದು, ವಿಶ್ವಕರ್ಮವಿಲ್ಲದ ಯುಗವಿಲ್ಲ ಎಂದರು.

ಸಮಾಜದ ಮುಖಂಡ ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ವಿಶ್ವ ಕರ್ಮ ಸಮಾಜವನ್ನು ಗುರುತಿಸಿ 2015ರಲ್ಲಿ ಜಯಂತಿ ಆಚರಣೆ ಘೋಷಿಸುವುದರೊಂದಿಗೆ ಈ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪಿಸಿದರು. ವಿಶ್ವಕರ್ಮ ಸಮುದಾಯಕ್ಕೆ ತಾಲ್ಲೂಕು ಹಂತದಲ್ಲಿ ಸಮುದಾಯ ಭವನ ಅವಶ್ಯವಿದ್ದು, ಸರ್ಕಾರ ನಿವೇಶನ ಗುರುತಿಸಿ ನೀಡಬೇಕು ಎಂದು ಮನವಿ ಮಾಡಿದರು.

ವಿಶ್ವಕರ್ಮ ತಮ್ಮ ಕುಲ ಕಸುಬಿನಲ್ಲಿ ಸಮಾಜಕ್ಕೆ ಅಗತ್ಯವಿರುವ ವಿವಿಧ ಸಾಧನಗಳನ್ನು ಮಾಡಿಕೊಡುವ ಜತೆಗೆ ಕೃಷಿ ಕ್ಷೇತ್ರದಿಂದ ಆಧುನಿಕ ತಂತ್ರಜ್ಞಾನದವರೆಗೂ ಕೊಡುಗೆ ನೀಡಿದೆ. ಈ ಸಮಾಜವನ್ನು ಗುರುತಿಸಿ ಬೆಂಬಲಿಸಬೇಕು ಎಂದರು.

ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಆಯುಕ್ತೆ ಮಾನಸ, ಬಿಇಒ ಮಹದೇವ್, ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಕೃಷ್ಣಾಚಾರಿ, ಕುಮಾರ್, ಪುಟ್ಟರಾಜ್. ಹೊನ್ನಪ್ಪ, ಹೊಸೂರು ಕುಮಾರ್, ಮೋದೂರು ಮಹೇಶಾರಾಧ್ಯ, ಸತ್ಯಪ್ಪ, ವಿಶ್ವಕರ್ಮ ಗೌರವಾಧ್ಯಕ್ಷ ಚಂದ್ರಚಾರ್, ರಘು, ಶ್ರೀಕಂಠ, ನಾರಾಯಣಚಾರ್, ನಾಗರಾಜ್, ರಾಣಿ ರಾಘವೇಂದ್ರ, ಜನ್ವಂತ್, ವೆಂಕಟೇಶಚಾರ್, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಲತಾ, ಬಿಜೆಪಿ ಮುಖಂಡ ಚಂದ್ರಶೇಖರ್ ಇದ್ದರು. ರಂಗಕರ್ಮಿ ಜಯರಾಮ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.