ಮೈಸೂರು: ‘ಮಹಿಳೆಗೆ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ಇಂದಿನ ಸಮಾಜ ಮಹಿಳೆಯರ ಕುರಿತು ಮನೋಭಾವವನ್ನು ಬದಲಿಸಿಕೊಳ್ಳಬೇಕು’ ಎಂದರು.

‘ಮಹಿಳೆಯರನ್ನು ಗೌರವಿಸಬೇಕು. ಅವರನ್ನು ಮುಖ್ಯ ವಾಹಿನಿಗೆ ತರಲು ಹೆಚ್ಚು ಅವಕಾಶ ಇರಬೇಕು’ ಎಂದು ಆಶಿಸಿದರು.

‘ಸ್ವಾತಂತ್ರ್ಯವೆಂದರೆ ಅನ್ಯರ ಕಪಿ ಮುಷ್ಟಿಯಿಂದ ಹೊರ ಬರುವುದಷ್ಟೇ ಅಲ್ಲ. ಬದಲಿಗೆ ಕಾನೂನು ಪಾಲಿಸುವುದು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡುವುದು ಹಾಗೂ ಮೌಲ್ಯಯುತ ಜೀವನ ರೂಪಿಸಿಕೊಳ್ಳುವುದೇ ಆಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ., ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗ–ಬಲಿದಾನ ಮನಗಂಡು ಅವರ ಮೌಲ್ಯಗಳನ್ನು ಪಾಲಿಸಬೇಕು’ ಎಂದು ಹೇಳಿದರು.

ಸಹ ಪ್ರಾಧ್ಯಾಪಕಿ ಕಿರಣ್ಮಯಿ ಪಿ. ನಾಗವಂದ ಮಾತನಾಡಿದರು. ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಎನ್.ಎಸ್.ಎಸ್.ಅಧಿಕಾರಿ ಲಕ್ಷ್ಮಣ ಬಿ., ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು ಹಾಜರಿದ್ದರು.

ಹಾಸ್ಟೆಲ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸರಸ್ವತಿಪುರಂನಲ್ಲಿರುವ ದೀನದಯಾಳ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯದ ಆವರಣದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಶೈಕ್ಷಣಿಕ ಡೀನ್ ಶ್ರೀಪಾದ್ ಎಚ್.ಆರ್., ಹನುಮಂತಪ್ಪ ಮಕರಿ, ರಮೇಶ್ ಕೆ.ಎಲ್., ಅಭಿನಂದಿನಿ, ಲೀಲಾವತಿ, ಸುಧಾ, ಲಕ್ಷ್ಮಣ ಬಿ., ಸಿದ್ದರಾಜು, ನಿಲಯಪಾಲಕಿ ಪದ್ಮಾ ಸಿ., ಗೋವಿಂದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.