ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

Last Updated 7 ಡಿಸೆಂಬರ್ 2019, 13:50 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. 2006ಕ್ಕೆ ಮುಂಚಿನ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದುಆಗ್ರಹಿಸಿ ಕರ್ನಾಟಕ ರಾಜ್ಯಸರ್ಕಾರಿಎನ್‌ಪಿಎಸ್ನೌಕರರ ಸಂಘ,ಪೌರ ಸೇವಾ ನೌಕರರ ಸೇವಾ ಸಂಘದ ಸದಸ್ಯರು ಶನಿವಾರಜಿಲ್ಲಾಧಿಕಾರಿ ಕಚೇರಿಮುಂದೆಪ್ರತಿಭಟನೆ ನಡೆಸಿದರು.

ಎನ್‌ಪಿಎಸ್ ಯೋಜನೆಗೆ ಒಳಪಡುವ ನೌಕರರ ನಿವೃತ್ತಿ ಬದುಕಿನ ಭದ್ರತೆಗೆ,ನೌಕರರ ಅವಲಂಬಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡಲುಶೇ 10ರಷ್ಟು ಕಡಿಯ ಮಾಡಲಾಗುತ್ತಿದೆ. ಸರ್ಕಾರ ಅದಕ್ಕೆ ಸಮಾನವಾದ ಮೊತ್ತ ವಂತಿಗೆ ರೂಪದಲ್ಲಿ ನೀಡಿ, ಖಾಸಗಿ ಹಣಕಾಸು ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತಿದೆ. 35 ವರ್ಷಗಳ ನಂತರ ಬಂದ ಲಾಭದಲ್ಲಿ ಈ ಹಣ ಉಪಯೋಗಿಸಿದ ಹಣದಲ್ಲಿ ಕಂಪನಿಗಳು ನೌಕರರಿಗೆ ಪಿಂಚಣಿ ನೀಡುತ್ತವೆ. ಅದಕ್ಕಾಗಿ ಯಾವುದೇ ನಿರ್ದಿಷ್ಟಕಾನೂನು ರಚಿಸಿಲ್ಲ.ನೌಕರರು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆಇಲ್ಲ ಎಂದು ದೂರಿದರು.

ಈ ಯೋಜನೆ ಪ್ರಪಂಚದಹಲವುದೇಶಗಳಲ್ಲಿ ವಿಫಲಗೊಂಡ ಪಿಂಚಣಿ ಯೋಜನೆ. ಈ ಯೋಜನೆಯಡಿ ಹೂಡಿರುವ ನೌಕರರ ಹಣ 2008ರಲ್ಲಿ ಉಂಟಾದ ಷೇರು ಮಾರುಕಟ್ಟೆ ಕುಸಿತದಿಂದಸಂಪೂರ್ಣ ನಷ್ಟ ಹೊಂದಿದೆ.ನೌಕರರ, ಜನಸಾಮಾನ್ಯರ ಹಣ ಹೂಡಿಕೆ ಮಾಡಿದ್ದ ಕಂಪನಿಗಳು ದಿವಾಳಿಯಾಗಿವೆ. ಪಿಂಚಣಿ ಹಣ, ವಿಮೆ ಹಣ, ಉಳಿತಾಯದ ಹಣ ಕಳೆದುಕೊಂಡು ಹಲವು ನೌಕರರು ನಿರ್ಗತಿಕರಾಗಿದ್ದಾರೆ.ಆದರೂ, ಸರ್ಕಾರ ತನ್ನ ನೌಕರರನ್ನು ಅನಿಶ್ಚಿತ ಸ್ಥಿತಿಗೆ ನೂಕಿದೆ ಎಂದು
ಎನ್ಪಿಎಸ್ ಯೋಜನೆ ರದ್ದುಪಡಿಸಿ ಈ ಮೊದಲಿನಂತೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ರಾಘವೇಂದ್ರ, ಪೃಥ್ವಿರಾಜ್, ಬಸವಗೌಡ, ಪ್ರಭಾಕರ್, ಶಾಂತಕುಮಾರ್, ರಾಜ್ಯ ಪೌರ ಸೇವಾ ನೌಕರರ ಸೇವಾ ಸಮಿತಿಯ ಮುಖಂಡ ಎನ್.ಪ್ರಸಾದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT