ಸೋಮವಾರ, ಫೆಬ್ರವರಿ 24, 2020
19 °C

ಶರಣ್ಯ ಸಂಸ್ಥೆ: ಡಿ.8ಕ್ಕೆ ನಮನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಂಬೇಡ್ಕರ್ ಭವನದಲ್ಲಿ ಡಿ.8 ರಂದು ಸಂಜೆ 6.15ಕ್ಕೆ ಡಿಎಸ್ಎಲ್ ಟ್ರಸ್ಟ್‌ ಶರಣ್ಯ ಸಂಸ್ಥೆ ‘ನಮನ’ ಕಾರ್ಯಕ್ರಮ ಆಯೋಜಿಸಿದೆ. 

ಶರಣ್ಯ ಸಂಸ್ಥೆ 15 ವರ್ಷಗಳಿಂದ ಉಲ್ಬಣಿಸಿದ ರೋಗ ಪೀಡಿತರಿಗೆ ಆರೈಕೆ, ಆಶ್ರಯ, ಸಾಂತ್ವನ ಮತ್ತು ಆತ್ಮಸ್ಥೈರ್ಯ ನೀಡುತ್ತಾ ಬಂದಿದೆ. ಸಾವಿರಾರು ರೋಗಿಗಳಿಗೆ ಆಶ್ರಯ ನೀಡಿದೆ. ಪ್ರಾರಂಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಾಂತ್ವನ ನೀಡಲು ಈ ಸಂಸ್ಥೆ ಪ್ರಾರಂಭವಾಗಿತ್ತು. ಆನಂತರ ಇತರ ರೋಗಿಗಳ ಆರೈಕೆಗೂ ಮುಂದಾಗಿದೆ.  ಗಾಜನೂರು ಅಗ್ರಹಾರದಲ್ಲಿ ಸುಮಾರು 10.5 ಎಕರೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ, ರೋಗಿಗಳ ಸೇವೆ ಮಾಡುತ್ತಾ ಬಂದಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಡಿ.ಎಲ್.ಮಂಜುನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೋಗಿಗಳಿಗೆ ಉಚಿತ ಆಶ್ರಯ ನೀಡಲಾಗುತ್ತಿದೆ. ರೋಗಿಗಳಿಗೆ ನೆರವಾಗುವ ಪೋಷಕರಿಗೆ ಉಳಿಯಲು ಅವಕಾಶ ನೀಡಲಾಗುತ್ತಿದೆ. ಊಟೋಪಚಾರ ಮಾಡಲಾಗುತ್ತಿದೆ. ತಜ್ಞ ವೈದ್ಯರ ಭೇಟಿ, ನಿರಂತರ ತಪಾಸಣೆ, ಕ್ರೀಡೆ, ಮನರಂಜನೆ, ಟಿವಿ ಸೌಲಭ್ಯ ಸೇರಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. 15 ವರ್ಷದಲ್ಲಿ ಸಂಸ್ಥೆಗೆ ದಾನ ನೀಡಿದವರನ್ನು ನೆನಪಿಸಿಕೊಳ್ಳಲು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದುದೆ. ವಿಆರ್‌ಎಲ್‌ ಮುಖ್ಯಸ್ಥ ವಿಜಯಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ವಾಗ್ಮಿ ನಿತ್ಯಾನಂದ ವಿವೇಕವಂಶಿ ಉಪನ್ಯಾಸ ನೀಡುವರು. ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ಉಪಾಧ್ಯಕ್ಷ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸಿ.ಎನ್.ಶ್ರೀನಿವಾಸ್, ರಾಮಚಂದ್ರ ಗುಣಾರಿ, ಕೆ.ಎಸ್.ಶ್ರೀನಿವಾಸ್, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಸಂಪತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು