ಬುಧವಾರ, ಫೆಬ್ರವರಿ 26, 2020
19 °C

ಡಸ್ಟ್ ಸಿಟಿ’ಯಾಗುತ್ತಿರುವ ಶಿವಮೊಗ್ಗ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಸ್ಮಾರ್ಟ್‌ಸಿಟಿ ಆಗಬೇಕಿದ್ದ ಶಿವಮೊಗ್ಗ ಡಸ್ಟ್ ಸಿಟಿಯಾಗಿ ರೂಪಾಂತರಗೊಂಡಿದೆ’ ಎಂದು ಮಾನವಹಕ್ಕುಗಳ ಸಮಿತಿ ಅಧ್ಯಕ್ಷ ಕೆ.ನಾಗರಾಜ್, ರಾಷ್ಟ್ರೀಯ ಹಿಂದೂಸ್ತಾನ್ ಸೇನೆ ಜಿಲ್ಲಾ ಸಂಚಾಲಕ ಶ್ರೀಕಾಂತ್ ಜಿ. ಭಟ್ ದೂರಿದರು.

ಕಾಮಗಾರಿಗಳು ಗೊಂದಲದ ಗೂಡಾಗಿವೆ. ಚೆನ್ನಾಗಿರುವ ಬಾಕ್ಸ್ ಚರಂಡಿ, ರಸ್ತೆ ಒಡೆದುಹಾಕಲಾಗಿದೆ. ರಸ್ತೆಯುದ್ದಕ್ಕೂ ತೋಡಿದ ಗುಂಡಿಗಳಲ್ಲಿ ಹಲವರು ಬಿದ್ದು ಗಾಯಗೊಂಡಿದ್ದಾರೆ. ಬೈಕ್ ಸವಾರನೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಪ್ರಾಣಿಗಳೂ ಕಾಲು ಮುರಿದುಕೊಂಡಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿಯ ಯಾವ ಮಾಹಿತಿಯನ್ನೂ ಅಧಿಕಾರಿಗಳು ನೀಡುತ್ತಿಲ್ಲ. ಗುತ್ತಿಗೆದಾರ ಯಾರು ಬಹಿರಂಗ ಪಡಿಸುತ್ತಿಲ್ಲ. ವಿವಿಧ ಇಲಾಖೆಗಳ ಜತೆ ಸಮನ್ವಯವೂ ಇಲ್ಲ. ಕಾಂಕ್ರೀಟ್ ರಸ್ತೆಗಳನ್ನೂ ಒಡೆದುಹಾಕುತ್ತಿದ್ದಾರೆ. ಒಂದು ರಸ್ತೆಯಲ್ಲಿ ನಾಲ್ಕು ಗುಂಡಿಗಳನ್ನು ತೆಗೆಯುವ ಬದಲು ಒಮ್ಮೆ ಗುಂಡಿ ತೋಡಿ ಎಲ್ಲಾ ಪೈಪ್‌ಗಳನ್ನು ಹಾಕಬಹುದು. ಯೋಜನೆಯ ಹಣ ಲೂಟಿ ಮಾಡಲು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗುಂಡಿ, ದೂಳಿನಿಂದ ಇಡೀ ಶಿವಮೊಗ್ಗ ಜನರು ಶ್ವಾಸಕೋಶದ ಕಾಯಿಲೆ ತುತ್ತಾಗಿದ್ದಾರೆ. ಹಿಡಿಶಾಪ ಹಾಕುತ್ತಿದ್ದಾರೆ. ಸ್ಮಾರ್ಟ್‌ಸಿಟಿಯ ಅಧಿಕಾರಿಗಳು ಇತರೆ ಯಾವುದೇ ಇಲಾಖೆಯ ಜತೆ ಸಮನ್ವಯ ಸಾಧಿಸಿಲ್ಲ. ಸಹಭಾಗಿತ್ವ ಸಭೆ ನಡೆಸಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಾರದ ಒಳಗೆ ಕಾಮಗಾರಿಗಳ ವಿವರ ನೀಡಬೇಕು. ಅಂಕಿ-ಅಂಶ ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕು. ಚರಂಡಿಗೆ ಬಿದ್ದು ಗಾಯಗೊಂಡ ಗರ್ಭಿಣಿಗೆ ಮಹಿಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾನವಹಕ್ಕುಗಳ ಸಮಿತಿ ರಾಜ್ಯ ಮಾಧ್ಯಮ ಸಲಹೆಗಾರ ಎಸ್.ಕೆ.ಗಜೇಂದ್ರಸ್ವಾಮಿ, ಸಂಚಾಲಕ ವೀರೇಶ್ ಚಿತ್ತರಗಿ, ಪದಾಧಿಕಾರಿಗಳಾದ ಮಂಜು ನಾಯ್ಡು, ವೆಂಕಟೇಶ್, ರಮೇಶ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು