ಶನಿವಾರ, ಸೆಪ್ಟೆಂಬರ್ 19, 2020
21 °C

ಸೂಕ್ತ ಪರಿಹಾರ ನೀಡಲು ಸಿದ್ಲಿಪುರ ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪರಿಹಾರ, ನಿವೇಶನ ನೀಡಲು ಒತ್ತಾಯಿಸಿ ಸಿದ್ಲಿಪುರ, ದೇವಕಾತಿಕೊಪ್ಪ ರೈತ ಒಕ್ಕೂಟದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಿದ್ಲಿಪುರ ಗ್ರಾಮದ ಸರ್ವೆ ನಂಬರ್ 6ಮತ್ತು 28ರಲ್ಲಿ 40 ವರ್ಷಗಳಿಂದ ಪರಿಶಿಷ್ಟ ಜಾರಿಗೆ ಸೇರಿದ 33 ಬಡ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. 2012ರಿಂದಲೂ ಭೂಮಿಯ ಪರಿಹಾರಕ್ಕಾಗಿ ಹಲವು ಬಾರಿ ಪ್ರಯತ್ನಿಸಿದರೂ ಪರಿಣನೆಗೆ ತೆಗೆದುಕೊಳ್ಳುತ್ತಿಲ್ಲ. ಬಗರ್‌ಹುಕುಂ ರೈತರಿಗೆ ಪರಿಹಾರ ಹಾಗೂ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತರ ಭೂಮಿಗೆ ಹಣ ನಿಗದಿ ಮಾಡುವಾಗ ಎಕರೆಗೆ ₨ 30ಲಕ್ಷ, ಖುಷ್ಕಿ ಜಮೀನಿಗೆ ₨ 14 ಲಕ್ಷ, ತರಿ ಜಮೀನಿಗೆ ₨ 15 ಲಕ್ಷ ಎಂದು ನಿರ್ಧರಿಸಲಾಗಿದೆ ಎಂದು ನೆನಪಿಸಿದರು.

ಭೂಮಿ ಕಳೆದುಕೊಂಡ ರೈತರ ಕುಟುಂಬಗಳಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕು. ಪ್ರತಿ ಕುಟುಂಬಕ್ಕೂ ಕನಿಷ್ಠ 40X60 ಅಳತೆಯ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ, ಧನಂಜಯ, ದೀಪಕ್‌ ನಾಯಕ್, ಗುಂಡೂರಾವ್, ಮಾರಭೋವಿ, ನಂದೀಶಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು