ರಾಯಚೂರು: ಹೆತ್ತ ಮಗನ ಕತ್ತು ಹಿಸುಕಿ ಸಾಯಿಸಿದ ಪಾಪಿ ತಂದೆ
ರಾಯಚೂರು: ತವರು ಮನೆಗೆ ಹೋಗಿದ್ದ ಪತ್ನಿ ಮೇಲಿನ ದ್ವೇಷಕ್ಕಾಗಿ ತಾನು ಹೆತ್ತ ಮಗುವನ್ನೇ ತಂದೆಯು ಅಪಹರಿಸಿ ಕತ್ತು ಹಿಸುಕಿ ಸಾಯಿಸಿದ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಎಲೆಕೂಡಗಿಯಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ.
ಕಲ್ಮಂಗಿ ಗ್ರಾಮದ ಆರೋಪಿ ಯಲ್ಲಪ್ಪನನ್ನು ತುರ್ವಿಹಾಳ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವ ಮಹೇಶ (4) ಮೃತಪಟ್ಟ ನತದೃಷ್ಟ ಬಾಲಕ.
ಕೌಟುಂಬಿಕ ಕಲಹ ಕಾರಣದಿಂದ ಆರೋಪಿಯ ಪತ್ನಿ ಪಾರ್ವತಿಯು ತವರು ಮನೆಯಲ್ಲೇ ಉಳಿದುಕೊಂಡಿದ್ದರು. ಪತ್ನಿಯ ತವರಿಗೆ ಹೋಗಿದ್ದ ಆರೋಪಿ ಜಗಳ ಮಾಡಿಕೊಂಡಿದ್ದಲ್ಲದೆ, ಮಗುವನ್ನು ಎತ್ತಿಕೊಂಡು ಕಣ್ಮರೆಯಾಗಿದ್ದ.
ಈ ಸಂಬಂಧ ಮಗು ಅಪಹರಿಸಲಾಗಿದೆ ಎಂದು ಫೆಬ್ರುವರಿ 1 ರಂದು ದೂರು ದಾಖಲಿಸಲಾಗಿತ್ತು. ದೂರು ಸಲ್ಲಿಸಿದ್ದ ಮರುದಿನವೆ ಕಬ್ಬಿನ ಗದ್ದೆಯೊಂದರಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.